Loading Now

*ಡಿಸೆಂಬರ್ 15 ರಂದು ಬರಲಿದೆ ‘ಬ್ಲಾಂಕ್’ ಹಾಡು.*

 *ವಿಜಯ್ ಪ್ರಕಾಶ್ – ಆಶಾ ಭಟ್ ಹಾಡಿರುವ ಈ ಹಾಡು A2 MUSIC ಮ್ಯೂಸಿಕ್ ಮೂಲಕ ಬಿಡುಗಡೆ.* 
ಫೆಲಿಸಿಟಿ ಫಿಲಂಸ್ ಲಾಂಛನದಲ್ಲಿ ಎನ್ ಪಿ  ಮಂಜುನಾಥ್ ಪ್ರಸನ್ನ  ಅವರು ನಿರ್ಮಿಸಿರುವ ‘ಬ್ಲಾಂಕ್’ ಚಿತ್ರಕ್ಕಾಗಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಸರಿಗಮಪ ಖ್ಯಾತಿಯ ಆಶಾ ಭಟ್ ಹಾಡಿರುವ ಹಾಡೊಂದು A2 MUSIC ಮೂಲಕ ಬಿಡುಗಡೆಯಾಗಲಿದೆ. ಶ್ರೀ ಶಾಸ್ತ ಸಂಗೀತ ನೀಡಿದ್ದಾರೆ. 
ಎಸ್ ಜಯ್ ನಿರ್ದೇಶಿಸಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಎಸ್ ಜಯ್, ಅಂಬರೀಶ್ ಪತ್ತಾರ್ ಹಾಗೂ ಶ್ರೀಕಾಂತ್ ಆಂಜಲ್ ಸಂಭಾಷಣೆ ಬರೆದಿದ್ದಾರೆ. 
ಜೆ.ಪಿ.ಮ್ಯಾನ್ ಛಾಯಾಗ್ರಹಣ, ಶ್ರೀಶಾಸ್ತ ಸಂಗೀತ ನಿರ್ದೇಶನ, ಅಶೋಕ್ ಸಾಹಸ ನಿರ್ದೇಶನ ಹಾಗೂ ವಿಜಯ್ ಅವರ ನೃತ್ಯ ನಿರ್ದೇಶನ ‘ಬ್ಲಾಂಕ್’ ಚಿತ್ರಕ್ಕಿದೆ.
ಪೂರ್ಣಚಂದ್ರ ಮೈಸೂರು, ಕೃಷಿ ತಾಪಂಡ, ಪ್ರಶಾಂತ್ ಸಿದ್ದಿ, ಸುಚೇಂದ್ರ ಪ್ರಸಾದ್, ಭರತ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.‌

Post Comment

You May Have Missed