ಡಾ.ಬಿ.ಆರ್.ಅಂಬೇಡ್ಕರ್ ರವರ 65 ನೇ ಧಮ್ಮ ದೀಕ್ಷೋತ್ಸವ ಹಾಗೂ ಸಾಮ್ರಾಟ್ ಅಶೋಕ ಚಕ್ರವರ್ತಿಯ ಧಮ್ಮ ವಿಜಯ ಮತ್ತು ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಎರಡನೆ ವರ್ಷದ ಕಾರ್ಯಕ್ರಮ.
ತಿ.ನರಸೀಪುರ. ಅ.16:-ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬುದ್ಧ ಭಿಕ್ಷುವಿನಿಂದ ಧಮ್ಮ ದೀಕ್ಷೆಯನ್ನು ಸ್ವೀಕರಿಸಿದ ಪುಣ್ಯ ಭೂಮಿ ನಾಗಪುರಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ಕೂಡಬೇಕೆಂದು ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಹೊರ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಹತ್ತಿರ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಅಯೋಜನೆಗೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 65 ನೇ ಧಮ್ಮ ದೀಕ್ಷೋತ್ಸವ ಹಾಗೂ ಸಾಮ್ರಾಟ್ ಅಶೋಕ ಚಕ್ರವರ್ತಿಯ ಧಮ್ಮ ವಿಜಯ ಮತ್ತು ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಎರಡನೆ ವರ್ಷದ ಕಾರ್ಯ ಕ್ರಮದ ಅಧ್ಯಕ್ಷತೆ ಜೊತೆಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಾಮಾಜಿಕ ಅಸಮಾನತೆಯ ಅವಮಾನದಿಂದ ಹೊರಬರಲು ಅಂಬೇಡ್ಕರ್ ರವರು ಕೈಗೊಂಡ ದಿಟ್ಟ ಕ್ರಮಗಳಲ್ಲಿ ಬೌದ್ಧ ಧರ್ಮ ಸ್ವೀಕಾರವೂ ಒಂದು, ಧರ್ಮವು ಸಮಾಜಕ್ಕೆ ಅಗತ್ಯ ಎಂದೇ ಪ್ರತಿಪಾದಿಸಿದ್ದ ಅಂಬೇಡ್ಕರ್ ತಮ್ಮ ಆದರ್ಶದ ಧರ್ಮವನ್ನು ಬುದ್ಧತತ್ವ ಹಾಗೂ ಬುದ್ಧ ಧರ್ಮದಲ್ಲಿ ಕಂಡುಕೊಂಡರು ಬುದ್ಧ ಗುರು ಬದುಕಿದ ಪ್ರಜಾಸತ್ತಾತ್ಮಕ, ಸಮಾನತೆ ಮತ್ತು ಸಹೋದರತ್ವಗಳೇ ನಿಜವಾದ ಧರ್ಮ ಎಂದು ನಂಬಿ ನಡೆದರು,ಬಾಬಾ ಸಾಹೇಬರು ಬೌದ್ದ ಭಿಕ್ಷುವಾಗಿ ಮುಂದಿನ ಜೀವನಕ್ಕೆ ಕಾಲಿಟ್ಟ ಭೂಮಿ ನಾಗಪುರ ನಮ್ಮೇಲ್ಲರಿಗೂ ಪವಿತ್ರ ಭೂಮಿಯಾಗಿದೆ ಈ ದಿವಸ ಅಲ್ಲಿ ಮನೆ ಮನೆ ಹಬ್ಬವಾಗಿ ಬೌದ್ದ ಧಮ್ಮ ದೀಕ್ಷೋತ್ಸವ ಆಚರಣೆ ನೆಡೆಯುತ್ತದೆ ಆ ಪುಣ್ಯ ಸ್ಥಳಕ್ಕೆ ಹೋಗಿ ಬರಲು ಸರ್ಕಾರದಿಂದ ವ್ಯವಸ್ಥೆ ಸಹ ಇರುವುದರಿಂದ ತಾವುಗಳು ಒಮ್ಮೆಯಾದರೂ ಹೋಗಿ ಬನ್ನಿ ಅಲ್ಲಿಯ ವಾತಾವರಣ ಇಲ್ಲಿ ಸೃಷ್ಟಿಯಾಗಲಿ ಎಂದರು.
ಮುಂದುವರೆದು ಮಾತನಾಡಿದ ಶಾಸಕರುಡಾ.ಬಿ.ಆರ್.ಅಂಬೇಡ್ಕರ್ ರವರು ಸಮಸ್ತ ಭಾರತೀಯರಿಗೆ ದಾರಿ ದೀಪವಾಗಿದ್ದಾರೆ,ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ,ಪ್ರಕೃತಿಯ ಮಡಿಲಲ್ಲಿ ಬರುವ ಪ್ರತಿಯೊಂದು ಜೀವಿಗೂ ಸಾಂವಿಧಾನಿಕ ಹಕ್ಕುಗಳ ಅಡಿಯಲ್ಲಿ ಬದುಕಲು ಅವಕಾಶ ಕೊಟ್ಟಿರು ಬಾಬಾ ಸಾಹೇಬರ ಚಿಂತನೆಯ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆ ಕರ್ತವ್ಯ ನಿರ್ಹಹಿಸುತ್ತಿದ್ದು,ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಬಾಬಾ ಸಾಹೇರನ್ನ ಸ್ಮರಿಸುತ್ತಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನೆಡೆಯೋಣವೆಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ಶಸ್ತ್ರಚಿಕಿತ್ಸ ತಜ್ಞ ಡಾ.ರೇವಣ್ಣ ಮತ್ತು ಕೀಲು ಮೊಳೆ ಚಿಕಿತ್ಸ ತಜ್ಞ ಡಾ.ದಯನಂದ್ ಬಾಬು ರವರನ್ನು ಸನ್ಮಾನಿಸಲಾಯಿತು,ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರೇವಣ್ಣ ಅಂಬೇಡ್ಕರ್ ಅವರು ಹುಟ್ಟು ಹೋರಾಟ ಗಾರರು, ಬಾಲ್ಯದಲ್ಲಿಯೇ ಮೌಡ್ಯ, ಕಂದಾಚಾರ, ಜಾತಿಯ ವಿಷಮ ಶೋಷಣೆಯನ್ನು ಪ್ರಶ್ನಿಸುತ್ತಿದವರು, ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವಂತೆ ಆಗಬೇಕು ಎಂದು ಹಂಬಲಿ ಸುತ್ತಿದ್ದರು, ಸಮಾಜವು ಸಮಾನತೆ ಮತ್ತು ಸಾಮಾಜಿಕ ನ್ಯಾಯದಿಂದ ದಲಿತರು, ಅಸ್ಪೃಶ್ಯರು, ಶೋಷಿತರು, ಮಹಿಳೆಯರು ಹಿಂದುಳಿದ ವರ್ಗದವರನ್ನು ದೂರ ಇಟ್ಟಿದೆ. ನಾವುಗಳು ಹೆಚ್ಚು ಹೆಚ್ಚು ಶಿಕ್ಷಿತರಾಗಿ, ವಿದ್ಯಾವಂತರಾದಂತೆ ನಮ್ಮ ಹಕ್ಕು ಮತ್ತು ಸಾಮಾಜಿಕ ಸಮಾನತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸ್ವಾಭಿಮಾನದಿಂದ ಹೇಳುತ್ತಿದ್ದರು. ಈ ಎಲ್ಲಾ ಅಂಶಗಳಿಂದ ಬಾಬಾ ಸಾಹೇಬರು ಈ ಜಗತ್ತು ಕಂಡರಿಯದ ಶ್ರೇಷ್ಠ ಶಿಕ್ಷಣ ತಜ್ಞರಾಗಿ ನೊಂದ ಜನರಿಗೆ,ದೀನಾ, ದಲಿತರಿಗೆ ದಾರಿ ತೋರಿತ್ತಾ ಇಂದು ನಮ್ಮೊಡನೆ ನಿಂತಿಯೇ ಇದ್ದಾರೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ಅಂಬೇಡ್ಕರ್ ಅವರ ಮೇಲೆ ಅಭಿಮಾನ ಇಟ್ಟಿರುವ ಪ್ರತಿಯೊಬ್ಬರು ಕುಟುಂಬ ಸಮೇತರಾಗಿ ಬುದ್ಧ ಧಮ್ಮವನ್ನ ಸ್ವೀಕರಿಸಿದಾಗ ದೇಶದ ಮೂಲ ಧರ್ಮವಾದ ಬೌದ್ಧ ಧರ್ಮ ಬಲಿಷ್ಠವಾಗಲಿದೆ. ಧಮ್ಮ ದೀಕ್ಷೆ ಉತ್ಸವಕ್ಕೆ ಒಬ್ಬರೇ ಬಂದು ವಿಚಾರ ಆಲಿಸಿ ಹೋಗುವುದ ರಿಂದ ಯಾವುದೇ ಪ್ರಯೋಜನವಿಲ್ಲ. ಈ ಬಗ್ಗೆ ಜನ ಸಮುದಾಯದಲ್ಲಿ ಗಂಭೀರ ಚಿಂತನೆಗಳು ನಡೆಯಬೇಕೆಂದು ಕಿವಿಮಾತು ಹೇಳಿದರು ಕಾರ್ಯಕ್ರಮದಲ್ಲಿ ಬುದ್ಧರತ್ನ ಬಂತೇಜಿ ಅವರು ಬುದ್ಧವಂದನೆ ಸಲ್ಲಿಸಿದರು.
ಬಾಕ್ಸ್ ಸುದ್ದಿ.“ಬಾಬಾ ಸಾಹೇಬ್ ಬೇಡ್ಕರ್ ರವರು ನಮ್ಮಿಂದ ದೂರ ಹೋಗಿದ್ದರು ಸಹ ಅವರು ಹಾಕಿಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಮಂತ್ರಗಳು ಇಂದಿಗೂ ನಂದಾ ದೀಪವಾಗಿ ಬೆಳಗುತ್ತಿದೆ. ಇವರು ಭಿತ್ತಿದ ಬೌದ್ಧಧರ್ಮದ ಬೀಜ ಇಂದು ಭಾರತಾದ್ಯಾಂತ ಹೆಮ್ಮರವಾಗಿ ಬೆಳೆಯುತ್ತಿದೆ”
ಶಾಸಕ ಎಂ.ಅಶ್ವಿನ್ ಕುಮಾರ್.
ಈ ಸಂದರ್ಭದಲ್ಲಿ ತಾಲ್ಲೂಕು ದಲಿತ ಸಂಘಟನೆ ಗಳ ಒಕ್ಕೂಟದ ತಾ.ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್,ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ಸೋಸಲೆ ಶಶಿಕಾಂತ್ , ಬಿ.ಪಿ.ಎಸ್ .ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ, ದ. ಸಂ.ಸ ಜಿಲ್ಲಾ ಪ್ರಧಾನ ಸಂಚಾಲಕ ಬನ್ನಹಳ್ಳಿ ಸೋಮಣ್ಣ , ಖಾಸಗಿ ಬಸ್ ಮಾಲಿಕರು ಹಾಗೂ ಏಜೆಂಟ್ ಸಂಘದ ಅಧ್ಯಕ್ಷ ಪುಟ್ಟರಾಜು, ವೀರಶೈವ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ಮಹದೇವ ಸ್ವಾಮಿ, ವೆಂಕಟರಮಣಶೇಟ್ಟಿ,ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಪ್ರಸಾದ್ ನಾಯಕ, ಕಳ್ಳಿಪುರ ಮಹದೇವಸ್ವಾಮಿ, ರಾಜಶೇಖರ ಮೂರ್ತಿ, ನಿಂಗರಾಜು, ಯರಗನಹಳ್ಳಿ ಸುರೇಶ್ , ಯಡದೊರೆ ಮಹಾದೇವಯ್ಯ, ಕುಕ್ಕೂರುರಾಜು, ಕೆಂಪ್ಪಯ್ಯನಹುಂಡಿ ರಾಜು,ನಂಜುಂಡಯ್ಯ ,ಬಸವರಾಜು, ಗ್ರಾಂ.ಪಂ.ಸದಸ್ಯ ಮನ್ನೆಹುಂಡಿ ನಾಗರಾಜು,ಆಲಗೂಡು ಶಿವಣ್ಣ, ,ಕನ್ನಡ ಪುಟ್ಟಸ್ವಾಮಿ ,ಪುರಸಭೆ ಸದಸ್ಯ ತುಂಬಲ ಪ್ರಕಾಶ್ ,ಸೋಸಲೆ ಗ್ರಾ.ಪಂ ಅಧ್ಯಕ್ಷ ಪುಟ್ಟಸ್ವಾಮಿ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಲಿಂಗಪ್ಪಾಜಿ, ಹೆಮಂತ್ ,ಶಿವಮೂರ್ತಿ ಮತ್ತಿತರರು ಹಾಜರಿದ್ದರು.



Post Comment