ಡಾ.ಬಾಬು ಜಗ ಜೀವನ್ ರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುಧಾನ ಬಿಡುಗಡೆ ಮಾಡಿಸಲು ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ರವರ ಶ್ರಮ ಅತಿ ಹೆಚ್ಚಿನದು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮೆಚ್ಚುಗೆ.
ತಿ.ನರಸೀಪುರ. ಸೆ.30:-ಡಾ.ಬಾಬು ಜಗ ಜೀವನ್ ರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುಧಾನ ಬಿಡುಗಡೆ ಮಾಡಿಸಲು ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ರವರ ಶ್ರಮ ಅತಿ ಹೆಚ್ಚಿನದು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಭೈರಾಪುರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುಧಾನದಡಿಯಲ್ಲಿ ಕೆ ಐ ಆರ್ ಡಿ ಎಲ್ ನಿಗಮ ಕೈಗೆತ್ತಿಕೊಂಡಿರುವ ಸುಮಾರು ಒಂದು ಕೋಟಿ ವೆಚ್ಚದ ಬಾಬು ಜಗಜೀವನ್ ರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಬಾಬು ಜಗಜೀವನ್ ರಾಮ್ ಭವನಕ್ಕೆ ನಿರ್ಮಾಣಕ್ಕೆ ನಮ್ಮ ಪಕ್ಷದ ಮುಖಂಡ ಮರಯ್ಯ ರವರ ಪಾತ್ರ ದೊಡ್ಡದು ಅವರು ನಿರಂತರವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಸಂಬಂಧಿಸಿದ ಇಲಾಖೆಯ ಮಂತ್ರಿಗಳ ಜೊತೆ ಸಮನ್ವಯತೆ ಸಾಧಿಸಿ ಅನುಧಾನ ಬಿಡುಗಡೆ ಮಾಡಿಸಿದ್ದಾರೆ ಅವರ ಪರಿಶ್ರಮದಿಂದ ಭೈರಾಪುರದಲ್ಲಿ ಸುಸಜ್ಜಿತ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನ ತಲೆ ಎತ್ತಲಿದ್ದು ಸಮುದಾಯದವರು ಇದರ ಸದುಪಯೋಗ ಒಳ್ಳಯ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಂದುವರೆದು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಭೈರಾಪುರದ ನಾಲ್ಕನೇ ವಾರ್ಡಿನಲ್ಲಿ ಕೊಳಚೆ ನಿರ್ಮಾಲನೆ ಮಂಡಳಿ ಅನುಧಾನದಲ್ಲಿ ಒಂದು ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಮುಂದಿನ ದಿನಗಳಲ್ಲಿ ಭೈರಾಪುರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷೆ ಪ್ರೇಮ,ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ರಮೇಶ್, ಪುರಸಭೆ ಸದಸ್ಯ ಎಲ್. ಮಂಜುನಾಥ್, ಮಾಜಿ ಅಧ್ಯಕ್ಷ ಎಳವರಹುಂಡಿ ಸೋಮು,ಪುರಸಭೆ ಸದಸ್ಯ ಮದನ್ ರಾಜ್, ಗ್ರಾ.ಪಂ.ಮಾಜಿ ಸದಸ್ಯ ದಿವಾಕರ್,ಕಾಂಗ್ರೆಸ್ ಮುಖಂಡರುಗಳಾದ ಸ್ವಾಮಿನಾಥ್ ಗೌಡ, ನಾಗರತ್ನಮ್ಮ,ಅಮ್ಜದ್ ಖಾನ್,ಗರ್ಗೇಶ್ವರಿ ಗೋಪಾಲ್,ಅನಿಲ್ ಕುಮಾರ್,ಸೋಸಲೆ ಮಂಜ,ಸಿದ್ದರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.



Post Comment