ಜಿ.ಎಸ್.ಟಿ ಬರಲು ನಮ್ಮನ್ನ ಆಳಿದವರು, ವಿದೇಶಿ ವ್ಯಾಮೋಹವೇ ಕಾರಣ ಭಾರತೀಯರು ಅರ್ಥಮಾಡಿಕೊಂಡರೆ ದೇಶ ಉಳಿಸಬಹುದು?
ಅಗದಷ್ಟು ಚಿನ್ನ ಎಂಬಂತೆ ನಾಲ್ಕೈದು ಶತಮಾನದ ಹಿಂದೆ ಭವ್ಯಭಾರತವನ್ನ ರೈಲ್ವೆ ಹಳಿಯಾಕಿ ಬ್ರಿಟೀಷರು ಲೂಟಿ ಮಾಡಿದರು, ಸಣ್ಣಪುಟ್ಟ ಶ್ರೀಮಂತ ಸಂಸ್ಥಾನ ಗುಡಿಗೋಪುರ ಅರಮನೆಗಳನ್ನ ಮೋಸದಿಂದ ವಶಪಡಿಸಿಕೊಂಡ ಸುಲ್ತಾನರು ಸಂಸ್ಕೃತಿ ಪರಂಪರೆಯನ್ನ ನಾಶಮಾಡಿದರು, ನಂತರ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ನಮ್ಮದು ಸ್ವಾತಂತ್ರ್ಯಕ್ಕಾಗಿ ಹೋರಾಟ ಪ್ರಾರಂಭವಾಯಿತು, ಬಿಳಿಯರು ಹೋದರು ಸಹ ವಿದೇಶಿ ವ್ಯಾಮೋಹಕ್ಕೆ ಸ್ವದೇಶಿ ಸಂಸ್ಕೃತಿಯನ್ನ ಬಲಿಕೊಟ್ಟೆವು, ಕಾಲಕ್ರಮೇಣ ಇಂಗ್ಲಿಷ್ ಎಂಜಲು ನಮ್ಮ ಭಾಷಾಭಿಮಾನ ನುಂಗುತ್ತಾ ಬಂದಿತು, ಪಂಚವಾರ್ಷಿಕ ಯೋಜನೆ ವ್ಯವಸಾಯ ನೀರಾವರಿ ಸಂಧರ್ಭದಲ್ಲಿ ನೂರಾರು ಎಕರೆಗಳನ್ನ ಟೆನೆಂಟ್ ಕಾಯ್ದೆಯಲ್ಲಿ ಸ್ವಂತ ಉಳುಮೆ ಭೂಮಿಯನ್ನ ಕಳೆದುಕೊಂಡವರು ಸಾವಿರಾರು ಮಂದಿಯಾದರೆ ಅದನ್ನ ಪಡೆದ ಲಕ್ಷಾಂತರ ಮಂದಿ ಇಂದಿಗೆ ವ್ಯವಸಾಯ ಬದಲು ನಿವೇಶನ ಭೂಮಾರಾಟ ಮನೋಭಾವದಿಂದ ದೇಶದ ಪ್ರಗತಿಯನ್ನ ಪಲ್ಟಿ ಹೊಡಯುವಂತೆ ಮಾಡಿದರು, ಅಪಾರ್ಟ್ಮೆಂಟ್ ಫ್ಲಾಟ್ ಮನೆಗಳು ಬರುವ ಮುನ್ನ ಕನಿಷ್ಠ ಒಂದು ಎಕರೆಯಲ್ಲಿ ವಾಸಿಸುತ್ತಿದ್ದ ತುಂಬಿದ ಕುಟುಂಬಗಳು ಸ್ವತಃ ಅವರೇ ಹಸು ಸಾಕಿ ಭಾವಿ ಅಗೆದು ಅವರಿಗೆ ಬೇಕಾದುದ್ದನ್ನ ಹಣ್ಣು ಕಾಯಿ ಸೊಪ್ಪು ತರಕಾರಿ ಬೆಳೆದು ಬದುಕುತ್ತಿದ್ದ ಕಾಲವದು ಕೊಟ್ಟು ತಗೋ ಬಾಟರ್ ಸಿಸ್ಟಮ್, ವಿಪರ್ಯಾಸ ಎಂದರೇ 75% ಇದ್ದ ದೇಶದ ವ್ಯವಸಾಯ ಇಂದಿಗೆ 32% ತಲುಪಿದೆ, ವ್ಯವಸಾಯ ಭೂಮಿಗಳನ್ನೆ ಇಂದು ಬಡಾವಣೆ ನಿರ್ಮಾಣ ಭೂವ್ಯವಹಾರಗಳಿಗೆ ಬಲಿಕೊಟ್ಟೆವು, ಇನ್ನೂ ಶಿಕ್ಷಣ ವೇದ ಆಯುರ್ವೇದ ಯೋಗ ಗುರುಕುಲ ಕುಲಕಸಬು ಆಧಾರಿತ ದುಡಿಮೆಯು ವಂಶಪಾರಂಪರ್ಯವಾಗಿ ಬರುತ್ತಿದ್ದ ಶಿಕ್ಷಣ ಪದ್ದತಿನ್ನ ವಿದೇಶಿ ವ್ಯಾಮೋಹದ ಕಾನ್ವೆಂಟ್ ಸಂಪ್ರದಾಯಕ್ಕೆ ಮಾರುಹೋಗಿ ಇಂದಿಗೂ ಡೊನೇಶನ್ ಎಂಬ ಕ್ಯಾನ್ಸರ್ ಹಾವಳಿಗೆ ಬಡ ಮಧ್ಯಮ ವರ್ಗದ ಕುಟುಂಬ ಬಲಿಯಾಯಿತು, ನಮಗೆ ಬದುಕಲು ವರ್ಷವಿಡೀ ಯಾವ ಕಾಲದಲ್ಲಿ ನೈಸರ್ಗಿಕವಾಗಿ ಯಾವ ಆಹಾರ ಸೇವನೆ ಮಾಡಿದರೆ ಶಕ್ತಿ ನೀಡುತ್ತದೆ ಎಂದು ಹೇಳಿಕೊಡುತ್ತಿದ್ದ ಪೂರ್ವಜರು ಆದರೆ ಇಂದು ಔಷಧಿಗಳು ಮಾತ್ರೆಗಳೇ ಆಹಾರವಾಗಿ ಸೇವಿಸಬೇಕಾದ ಕಾಲ ಆಸ್ಪತ್ರೆಗಳು ವ್ಯಾಪಾರದ ಸ್ಥಿತಿಗೆ ತಲುಪಿದೆ, ಇದರ ಮಧ್ಯೆ ದೇಶದಲ್ಲಿ ಲಕ್ಷಾಂತರ ಸ್ವದೇಶಿ ಕಾರ್ಖಾನೆಗಳು ವಿದೇಶಿ ವ್ಯಾಮೋಹದ ಭಾರತೀಯರ ಕಾಂಪಿಟೇಶನ್ ಮುಂದೆ ಬಲಿಯಾದವು ಕೋಟ್ಯಾಂತರ ಮಂದಿ ನಿರಪರಾಧಿ ನಿರುದ್ಯೋಗಿಗಳಾದರು, ವಿದೇಶಿ ವ್ಯಾಮೋಹದ ಡೊನೇಷನ್ ಶಿಕ್ಷಣ, ಐಷಾರಾಮಿ ತಾಂತ್ರಿಕ ದುಡಿಮೆಗೆ ಬಲಿಯಾಗಿ ದೇಶದ ಹಳ್ಳಿಗಳಲ್ಲಿ ಕನಿಷ್ಠ ಒಂದು ಎಕರೆಯಲ್ಲಿ ವಾಸಿಸುತ್ತಿದ್ದ ತುಂಬಿದ ಕುಟುಂಬಗಳು ಕಾಲಿಯಾದವು ನಗರ ಪ್ರದೇಶದ ವಟಾರ ಸಂಸ್ಕೃತಿ ಬೆಳೆದವು ,ವಾರದ ಸಂತೆ, ಪಟ್ಟಣಗಳ ಪೇಟೆ ಮಾರುಕಟ್ಟೆಗಳಲ್ಲಿ ಕಾಲಿಡದ ಯಂಗ್ ಜನರೇಷನ್ ಹವಾನಿಯಂತ್ರಣ ಆನ್ಲೈನ್ ಶಾಫಿಂಗ್ ಮಾಡಲು ಮಂದಾಗಿದ್ದೇವೆ, ನಾವು ಜಾಗೃತರಾಗಬೇಕಿರುವುದು ಪ್ಯಾಕೆಟ್ ಹಾಲು ಪ್ಯಾಕೆಟ್ ಮೊಸರು ಮೂಟೆ ಅಕ್ಕಿಗೆ ಜಿಎಸ್ಟಿ ಬಂದಿದೆ ಎನ್ನುವ ಜೊತೆಯಲ್ಲೆ ಸಂತೆ ಪೇಟೆ ಮಾರುಕಟ್ಟೆ ಸ್ಥಳೀಯ ವ್ಯಾಪಾರಸ್ಥರಿಗೆ ಪ್ರೋತ್ಸಾಹ ವೋಕಲ್ ಫಾರ್ ಲೋಕಲ್, ನಮ್ಮೆಲ್ಲರ ಪೂರ್ವಜರು ರೈತರೇ ಆದರೆ ನಾವು ವ್ಯವಸಾಯ ಬಿಟ್ಟೆವು, ವಿದ್ಯಾವಂತರು ಪದವೀಧರರು ರೈತರಾಗಿ ಪರಿವರ್ತಿಸುವ ಕಾಲಬರಬೇಕು ನಾವೆ ಬೆಳೆದು ನಾವೆ ಉಪಯೋಗಿಸುವ ಸಮಯ ಬರಬೇಕು ವಿದೇಶಿ ಕಂಪನಿಗಳ ಸರಕು ನಿಲ್ಲಿಸಬೇಕು, ರೈತರ ಡೈರಕ್ಟ್ ಮಾರ್ಕೆಟ್ ಚಿಂತನೆ ಬರಬೇಕು ಶ್ರೀಮಂತ ವಿದ್ಯಾವಂತರು ದೇಶದ ಉಳಿವಿಗಾಗಿ ರೈತರಾಗಿ ಬದಲಾದರೆ ಮಾತ್ರ ಆರ್ಥಿಕ ಪರಿಸ್ಥಿತಿ ಹತೋಟಿಗೆ ಬರುತ್ತದೆ, ಇಲ್ಲವಾದರೇ ದೇಶದಲ್ಲಿ ಉಚಿತ ಸವಲತ್ತು ಪಾಪ್ಯುಲೇಷನ್ ಹೆಚ್ಚಾಗಿ ಶ್ರೀಲಂಕಾ ತರಹ ಪರಿಸ್ಥಿತಿಗೆ ತಲುಪಬೇಕಾಗುತ್ತದೆ.
ಅಜಯ್ ಶಾಸ್ತ್ರಿ , ಮೈಸೂರು.


Post Comment