Loading Now

ಗಾಯಿತ್ರಿ ಜಪ ಅನುಷ್ಠಾನ ಬಿಟ್ಟು ನಡೆದರೆ ಬದುಕಿನಲ್ಲಿ ಸಾರ್ಥಕತೆ ಇರುವುದಿಲ್ಲ :ವಿದ್ವಾನ್ ಕೃಷ್ಣಮೂರ್ತಿ .

ಮೈಸೂರು ಅ-11 :
ಅರ್ಚಕರ ಸಂಘ ಹಾಗೂ ವೀರಾಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಯಜುರ್ವೇದದ ಯಜುರ್ ಉಪಾಕರ್ಮವನ್ನು ಸಾಮೂಹಿಕವಾಗಿ ಬ್ರಾಹ್ಮಣರು ಯಜ್ಞೋಪವೀತಂ ಜನಿವಾರ ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ ಹೋಮ ನೆರವೇರಿಸಿ ಆಚರಿಸಿದರು, ಉಪಾಕರ್ಮದ ಅಂಗವಾಗಿ ಜನಿವಾರ ಧಾರಣೆ ಮಾಡಿದ ಸಮಾಜದ ಬ್ರಾಹ್ಮಣರಿಗೆ ಸಂಧ್ಯಾವಂದನೆ ಪುಸ್ತಕ ಹಾಗೂ ಗಾಯತ್ರಿ ಮಂತ್ರದ ಪುಸ್ತಕ ನೀಡಿ ಯಜುರ್ ಉಪಾಕರ್ಮ ಶುಭಾಶಯ ಕೋರಿ ಮಾತನಾಡಿದ ಅರ್ಚಕರ ಸಂಘದ ಅಧ್ಯಕ್ಷರು ಹಾಗೂ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಗಾಯತ್ರಿ ಮಂತ್ರ, ಅತ್ಯಂತ ಪ್ರಭಾವಶಾಲಿಯಾದುದು, ತೇಜಸ್ಸು, ಬುದ್ಧಿಶಕ್ತಿ ಮತ್ತು ಚಿತ್ತವೃತ್ತಿಯನ್ನು ಪಾವನಗೊಳಿಸುವುದೇ ಗಾಯತ್ರಿ ಮಂತ್ರ, ಗಾಯತ್ರಿ ಮಂತ್ರದಿಂದ ಉತ್ತಮ ಸಂಸ್ಕಾರ.

“ಬ್ರಹ್ಮ ಪವಿತ್ರವಾದ ಸೂರ್ಯನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ, ಅತ್ಯಂತ ಪ್ರಭಾವಶಾಲಿಯಾದುದು. ಈ ಮಂತ್ರವು ‘ನನಗೆ ತೇಜಸ್ಸನ್ನು ಕೊಡು, ನನ್ನ ಬುದ್ಧಿಶಕ್ತಿಯನ್ನು ಅರಳಿಸು, ಮತ್ತು ಚಿತ್ತವೃತ್ತಿಯನ್ನು ಪಾವನಗೊಳಿಸು’ ಎನ್ನುವ ಅರ್ಥದೊಂದಿಗೆ ಎಲ್ಲರಿಗೂ ಶುಭವಾಗಲಿ ಎನ್ನುವ ಪರ್ಯಾಯ ಸಂದೇಶವನ್ನು ನೀಡುತ್ತದೆ. ಸ್ವಸ್ಥಿಕ ಮುದ್ರೆಯಲ್ಲಿ ಅಡ್ಡಗೆರೆ ಮತ್ತು ಉದ್ದಗೆರೆಯು ಸಮಾನವಾಗಿದ್ದು, ಕ್ರಮವಾಗಿ ಧರ್ಮದ ಪಾಲನೆ ಮತ್ತು ಬ್ರಹ್ಮಜ್ಞಾನದ ಸಂಪಾದನೆ ಎತ್ತರಕ್ಕೆ ಬೆಳೆಯಲಿ ಎಂದು ತಿಳಿಸುತ್ತದೆ. ಪ್ರತಿದಿನದ ಸೂರ್ಯೋದಯವನ್ನು ನೋಡಿ ಅನುಭವಿಸಿದರೆ, ಅದೇ ಶುಭಘಳಿಗೆಯಾಗಿ ಪವಿತ್ರವೆನಿಸುವುದು.” ಎಂದು ಹೇಳಿದರು .

ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್ ,ಆಗಮಿಕರಾದ ಯೋಗರಾಜ್ ,ನಾಗರಾಜ್ ಚಿನ್ನಸ್ವಾಮಿ ಆಚಾರ್ಯ ಹಾಗೂಪಾಠಶಾಲಾ ವಿದ್ಯಾರ್ಥಿಗಳು ಇನ್ನಿತರರು ಹಾಜರಿದ್ದರು.

Post Comment

You May Have Missed