Loading Now

ಕೋಲಾರ ಮಾರುಕಟ್ಟೆ ಆವರಣದಲ್ಲಿ ನೂತನ ಶ್ರೀ ಮಹಾಗಣಪತಿ ದೇವಾಲಯ ಪ್ರತಿಷ್ಠಾಪನೆ ಮಹೋತ್ಸವ .

ಕೋಲಾರ :- ನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಗಣಪತಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಕಳೆದ 3 ದಿನಗಳಿಂದ ನಡೆಯುತ್ತಿರುವ ಪ್ರತಿಷ್ಠಾಪನಾ ಕಾರ್ಯ ಇಂದು ತೆರೆ ಕಂಡಿತು.

ಕೊನೆಯ ಹಾಗೂ ಮುಖ್ಯದಿನವಾದ ಇಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ವಿಶ್ವನಾರಾಧನೆ, ಸ್ವಸ್ತಿಪುಣ್ಯಾಹ ವಾಚನೆ, ಮಹಾಶಾಂತಿಸ್ಥಾಪನ (ಅಭಿಷೇಕ), ಕಳಶಾರಾಧನೆ. ಉಕ್ತಹೋಮಗಳು,
ಧಾತಾದಿ ಪ್ರಾಯಶ್ಚಿತ್ತ ಹೋಮ, ಗಣಪತಿ ಹೋಮ, ಗಕಾರ ಗಣಪತಿ ಹೋಮ, ಗಣಪತಿ ಗಾಯತ್ರಿ ಹೋಮ, ಮಹಾ ಪೂರ್ಣಾಹುತಿ, ಕುಂಭಸದ್ಯಪ್ರದಕ್ಷಿಣೆ, ಕುಂಭಾವಾಹನೆ, ಕಾಮಧೇನು ದರ್ಶನ, ಬ್ರಹ್ಮಘೋಷಪೂರ್ವಕ ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮ ಸಾಂಗೋಪಾಂಗವಾಗಿ ನಡೆಯಿತು,

ಈ ಪೂಜಾ ಕೈಂಕರ್ಯಗಳ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು, ವಿಧಾನಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಶಾಸಕ ಕೆ. ಶ್ರೀನಿವಾಸ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರು ಹಾಗೂ ಜೆಡಿಎಸ್ ಪಕ್ಷದ ಅಧಿನಾಯಕಿ ಕುರ್ಕಿ ರಾಜರಾಜೇಶ್ವರಿ, ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್, ರೋಟರಿ ಕಾರ್ಯದರ್ಶಿ ಸುಧಾಕರ್, ವಡಗೂರು ನಾಗರಾಜ್ ಸೇರಿದಂತೆ ಮುಂತಾ ದವರು ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಎಲ್ಲಾ ಪೂಜಾ ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣಾಚಾರ್, ಲಕ್ಷ್ಮೀನಾರಾಯಣಾಚಾರ್, ಮಧುಸೂದನ್ ಚಾರ್ ದೇವತಾ ಕಾರ್ಯಗಳನ್ನು ನೆರವೇರಿಸಿ ಕೊಟ್ಟರು .ಈ ಸಂದರ್ಭದಲ್ಲಿ ಸೇವಾಕರ್ತರಾದ RAP ನಾರಾಯಣಸ್ವಾಮಿ, ANR ದೇವರಾಜ್, ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು

Previous post

ವಾಲ್ಮೀಕಿ ಸಮಾಜದ ಚಿಂತನೆ ಮತ್ತು ಏಳಿಗೆಗೆ ಶ್ರಮಿಸಲು ಅನುಕೂಲವಾಗುವಂತೆ ವಾಲ್ಮೀಕಿ ಭವನ ನಿರ್ಮಾಣದ ಪವಿತ್ರ ಸ್ಥಳಕ್ಕೆ ಭೂಮಿ ಪೂಜೆ ಮಾಡಿದ್ದೇನೆ ಎಂದು ಶಾಸಕ‌ ಎಂ.ಅಶ್ವಿನ್ ಕುಮಾರ್ ತಿಳಿಸಿದರು.

Next post

ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗಳಿಗೆ ವಾಲ್ಮೀಕಿ ಆಶ್ರಮ ಶಾಲೆಗಳೆಂದು ಹೆಸರು ಬದಲಾಯಿಸಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ಗುಂಡಲ್ ಜಲಾಶಯ ಕಂಚಗಳ್ಳಿ ಗ್ರಾಮ ಸೋಲಿಗ ಸಮುದಾಯದ ಜನರು ಸರ್ಕಾರಕ್ಕೆ ಮನವಿ.

Post Comment

You May Have Missed