ಕೋಟಿ ಕಂಠ ಗಾಯನ ಯಶಸ್ವಿ: ಹೇಮಾ ನಂದೀಶ್ ಪ್ರಶಂಸೆ .
ಮೈಸೂರು ಅ-30 : ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನ ಅಭಿಯಾನದಡಿಯಲ್ಲಿ ವಿಶ್ವಾದ್ಯಂತ ಏಕಕಾಲದಲ್ಲಿ ಸುಮಾರು ಒ೦ದೂವರೆ ಕೋಟಿ ಜನರು ಕನ್ನಡದ 6 ಗೀತೆಗಳನ್ನು ಹಾಡಿ ದಾಖಲೆ ಸೃಷ್ಟಿಸಿದ್ದಾರೆ. ಕನ್ನಡ ನಾಡಿನುದ್ದಕ್ಕೂ ಕನ್ನಡ ಹಾಡುಗಳ ಝೇಂಕಾರವಾಗಿದೆ. ಕನ್ನಡಿಗರನ್ನು ಒ೦ದುಗೂಡಿಸಿದ ಸರ್ವ ಶ್ರೇಷ್ಠ ಕಾರ್ಯ ಕ್ರಮ. ಇದರಿ೦ದ ಹೊಸ ಪರಿಕಲ್ಪನೆಯೊಂದಿಗೆ ಇಂಥ ದೊ೦ದು ವಿನೂತನ ಕಾರ್ಯಕ್ರಮ ಆಯೋಜಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹತ್ವವನ್ನು ಹೆಚ್ಚಿಸಿರುವ ಸಚಿವ ವಿ.ಸುನೀಲ್ ಕುಮಾರ್ ರವರು ವಿಶ್ವ ಕನಡಿಗರ ಅಭಿನಂದನೆಗೆ ಅರ್ಹರು ಎಂದು ಬಿಜೆಪಿ ಮೈಸೂರು ನಗರ ಮಹಿಳಾ ಅಧ್ಯಕ್ಷರದ ಹೇಮಾ ನಂದೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Post Comment