Loading Now

ಕೊರೊನ ನಿಯಮ ಉಲ್ಲಂಘಿಸಿ, ಸಾಮಾಜಿಕ ಅಂತರವಿಲ್ಲದೆ ನಡೆದ ಶಿಕ್ಷಕರ ದಿನಾಚರಣೆ

ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನ ನಗರದ ಗುರುಭವನದಲ್ಲಿ ನಡೆಸಲಾಯಿತು, ಈ ಕಾರ್ಯಕ್ರಮವನ್ನ ಕ್ಷೇತ್ರ ಶಿಕ್ಷಣಾಧಿಕಾರಿಯವರ ನೇತೃತ್ವದಲ್ಲಿ ನಡೆಸಲಾಗಿದ್ದು ಈ ಕಾರ್ಯಕ್ರಮಕ್ಕೆ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರು ಹಾಗು ಇತರರು ಆಗಮಿಸಿದ್ದು, ಅದರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಾಸ್ಕ ಧರಿಸದವರೇ ಕಂಡು ಬಂದಿದ್ದಾರೆ,
ಕೊರೊನ ಎರಡನೇ ಅಲೆಯಿಂದ ಇನ್ನು ಸಹ ಬಿಡುಗಡೆ ಇಲ್ಲದೆ ಕೊರೊನ ಭೀತಿಯಲ್ಲಿ ಜನರು ತತ್ತರಿಸುತ್ತಿರುವುದು ಶಿಕ್ಷಣಾಧಿಕಾರಿಗಳಿಗೆ ತಿಳಿದಿದ್ದರು ಸಹ ತಮ್ಮ ಕಾರ್ಯಕ್ರಮದಲ್ಲಿಯೇ ಕೊರೊನ ನಿಯಮವನ್ನ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ, ಕಳೆದ ವಾರ ವೀಕೆಂಡ್ ಲಾಕ್ ಡೌನ್ ಜಾರಿಯಲ್ಲಿತ್ತು ಆದರೆ ಈ ವಾರ ವೀಕೆಂಡ್ ಲಾಕ್ ಡೌನ್ ತೆರವಾಗುತ್ತಿದ್ದಂತೆ ಕೊಳ್ಳೇಗಾಲ ನಗರದ ಗುರುಭವನದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೊರೊನ ನಿಯಮಗಳನ್ನ ಗಾಳಿಗೆ ತೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರವು ಇಲ್ಲದೆ ಗುಂಪುಗೂಡಿ ಕಾರ್ಯಕ್ರಮವನ್ನು ನಡೆಸಲಾಗಿದೆ ಕೊರೊನ ಮೂರನೇ ಅಲೆಯ ಭೀತಿಯಲ್ಲಿ ಸಾರ್ವಜನಿಕರು ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಗುರು ಸ್ಥಾನದಲ್ಲಿರುವವರೇ ಈ ರೀತಿ ನಿಯಮ ಉಲ್ಲಂಘಿಸಿ ಗುಂಪು ಸೇರಿಸಿ ಕಾರ್ಯಕ್ರಮವನ್ನ ನಡೆಸಿದರೆ ಮೂರನೇ ಅಲೆಯನ್ನು ಸ್ವಾಗತಿಸಿದಂತೆ ಎನ್ನಲಾಗಿದೆ,
ಸಾರ್ವಜನಿಕರು ನಡೆಸುವ ಮದುವೆ, ಹಬ್ಬ, ಹರಿದಿನಗಳಿಗೆ ನಿಯಮ ಅನ್ವಯವಾಗುತ್ತದೆ, ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಸಂವಿಧಾನಿಕ ಸಾಂಪ್ರದಾಯಿಕ ಧಾರ್ಮಿಕ ಹಬ್ಬಗಳಿಗೆ ಕೊರೊನ ನಿಯಮ ಅನ್ವಯವಾಗುತ್ತದೆ , ಅದೇ ಜವಾಬ್ದಾರಿಯುತ ರಾಜಕಾರಣಿಗಳು ಹಾಗು ಅಧಿಕಾರಿಗಳು ನಡೆಸೋ ಯಾವುದೇ ಕಾರ್ಯಕ್ರಮಗಳಿಗೂ ಕೊರೊನ ನಿಯಮ ಅನ್ವಯವಾಗುವುದಿಲ್ಲ ಇವರುಗಳು ಹೇಗೆ ಬೇಕಾದರೂ ಗುಂಪು ಸೇರಿಸಿ ಕಾರ್ಯಕ್ರಮಗಳನ್ನ ಆಯೋಜಿಸಬಹುದು ಹೇಗೆ ಬೇಕಾದರೂ ವೈರಸ್ ಅಣ್ಣ ಹರಡಬಹುದು ಇದಕ್ಕೆಲ್ಲ ಯಾವುದೇ ನಿಯಮ ನಿಬಂಧನೆಗಳು ಅಡ್ಡಿ ಬರೋದಿಲ್ಲ,
ಹಳ್ಳಿ ಕಡೆ ಒಂದು ಗಾದೆ ಹೇಳ್ತಾರೆ ಮೇಸ್ಟ್ರು ನಿಂತ್ಕೊಂಡು (ಒಂದ) ಮಾಡಿದ್ರೆ, ಹೈಕ್ಳು ಕುಣಿದಾಡ್ಕೊಂಡು ಮಾಡ್ತಿದ್ವಂತೆ ಅಂತ ಹಾಗೆ,
ಜಗತ್ತಿಗೆ ಮೌಢ್ಯತೆಗೆ ಜ್ಞಾನದ ಬೆಳಕನ್ನು ನೀಡುವ ಶಕ್ತಿಯ ಮೂಲ ನಮ್ಮ ಶಿಕ್ಷಕರು ಅಂದರೆ ಗುರುಗಳು, ಜಗತ್ತಿನ ಮೌಢ್ಯತೆಗೆ ಶಿಕ್ಷಣದ ಬೆಳಕನ್ನ ನೀಡುವ ಸುಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ ಗುರುವಿಗಿದೆ ಅ ಗುರುವಿಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ ಇದು ದೊಡ್ಡವರ ನಾಣ್ಣುಡಿ, ಇಂತಹ ಅಪಾರ ಜ್ಞಾನವನ್ನು ಹೊಂದಿರುವ ಶಿಕ್ಷಕರು ಈ ರೀತಿ ಎಡವಿದರೆ ತಿದ್ದುವವರು ಯಾರು ?

Post Comment

You May Have Missed