Loading Now

ಕೆಂಪು ವಸ್ತ್ರ ಹಾಗೂ ನೀಲಿ ವಸ್ತ್ರ ಧರಿಸಿ ಹಿಜಾಬ್ ವಿರುದ್ಧ ಘೋಷಣೆ


ಬೇಲೂರು 09 : ವೈಡಿಡಿ ಕಾಲೇಜಿನಲ್ಲಿ ಕೆಂಪು ವಸ್ತ್ರ ಹಾಗೂ ನೀಲಿ ವಸ್ತ್ರ ಧರಿಸಿ ಹಿಜಾಬ್ ವಿರುದ್ಧ ವೈಡಿಡಿ ಕಾಲೇಜಿಗೆ ವಿಧ್ಯಾರ್ಥಿಗಳು ಪ್ರವೇಶ ಮಾಡಿರುವ ಪ್ರಸಂಗ ನಡೆದಿದೆ.
ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವ ಹಿಜಾಬ್ ಹಾಗೂ ಕೆಂಪು ವಸ್ತ್ರದ ವಿರುದ್ಧ ಹಲವಾರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ವಸ್ತ್ರದ ಮೂಲಕ ತಮ್ಮ ಧರ್ಮದ ಹಕ್ಕನ್ನು ಚಲಾಯಿಸಲು ಹೋರಾಡುತ್ತಿದ್ದಾರೆ.
ಇದರ ಬೆಸುಗೆಯಾಗಿ ರಾಜಕೀಯ ಲೇಪನದಿಂದ ನ್ಯಾಯಾಲಯ ಮೊರೆಹೋಗಿದ್ದು ಇಂದು ಪ್ರಕರಣ ದಾಖಲಾಗಿದ್ದು ಸಮವಸ್ತ್ರ
ಇದನ್ನು ಖಂಡಿಸಿ ರಾಜ್ಯ ಸರ್ಕಾರ ಸಮವಸ್ತ್ರವನ್ನು ಆಯಾ ಕಾಲೇಜಿಗೆ ಸಂಬಂದಿಸಿದಂತೆ ಯಥಾಸ್ಥಿತಿ ಕಾಪಾಡಲು ಆದೇಶ ಹೊರಡಿಸಿದೆ.
ಅದರಲ್ಲೂ
ಬೇಲೂರು ವೈಡಿಡಿ ಕಾಲೇಜಿನಲ್ಲಿ ನೀಲಿ ವಸ್ತ್ರ ಧರಿಸಿದ ಅಂಬೇಡ್ಕರ್ ವಾದಿಗಳು,ಹಾಗೂ ಕೇಸರಿ ವಸ್ತ್ರ ಧರಿಸಿದ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಕಾಲೇಜಿಗೆ ಬರುವ ವಿಧ್ಯಾರ್ಥಿಗಳ ವಿರುದ್ಧ ಪ್ರತಿಭಟಿಸಿ ಕಾಲೇಜು ಪ್ರವೇಶಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ.ಇದರಿಂದ ಕಾಲೇಜಿಗೆ ಬರುವವರಿಗೆ ತೊಂದರಾಯಾಗಿದ್ದು ವಿದ್ಯಾರ್ಥಿಗಳೆಲ್ಲರೂ ಕಾಲೇಜಿನ ಹೊರಗಡೆ ನಿಂತಿರುವ ಘಟನೆ ನಡೆಯಿತು.
ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಯೊಬ್ಬಳು ಮಾತಾನಾಡಿ ಪ್ರತಿನಿತ್ಯ ಸಮವಸ್ತ್ರ ಹಾಗೂ ಬುರ್ಕಾ ಧರಸಿ ಕಾಲೇಜಿಗೆ ಪ್ರವೇಶ ಮಾಡುತ್ತಿದ್ದೆವು ,ಆದರೆ ಈಗ ಕೆಲ ವಿದ್ಯಾರ್ಥಿಗಳು ನಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಕೇಸರಿ ಶಾಲು ಧರಿಸಿ ನಮ್ಮ ವಿರುದ್ಧ ಘೋಷಣೆ ಕೂಗಿದ್ದಾರೆ.
ವಿದ್ಯಾರ್ಥಿಗಳು ಹಿತರಕ್ಷಣ ಭವಿಷ್ಯ ಕಾಪಾಡುವುದು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಜವಬ್ದಾರಿಯಾಗಿದ್ದು,ನಾವೂ ಕೂಡ ಸರ್ಕಾರದ ಆದೇಶ ಪಾಲಿಸುವುದರ ಜೊತೆ ಎಲ್ಲರೂ ಪಾಲಿಸುವಂತೆ ಅದರಂತೆ ನಾವುಪಾಲಿಸಲಿದ್ದೇವೆ ಎಂದರು.

ಕೇಸರಿ ಶಾಲು ಹಾಗೂ ನೀಲಿಶಾಲು ಧರಿಸಿದ ವಿದ್ಯಾರ್ಥಿಗಳು ಮಾತನಾಡಿಕಾಲೇಜಿನಲ್ಲಿ ಸಮವಸ್ತ್ರ ಇದ್ದರೂ ಧರಿಸಿದೆ ಕೆಲವರು ಇದ್ದರೇ, ಇನ್ನು ಕೆಲವರು ಧರಿಸಿ ಅದರ ಮೇಲೆ ವಿವಾಧದ ಬಟ್ಟೆಯನ್ನು ಹಾಕಿಕೊಂಡು ಬರುತ್ತಿದ್ದಾರೆ. ಬುರ್ಖಾ ತೆಗೆದು ಬರುವವರೆಗೂ ನಾವು ಕೇಸರಿ ಶಾಲು ತೆಗೆಯುವುದಿಲ್ಲ ಎಂದು ಹಲವಾರು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದು,
ಕಾಲೇಜಿನಲ್ಲಿ ಸಮಾನತೆ ಹಾಗೂ ಜಾತಿಧರ್ಮ ಹೆಸರನ್ನು ಕಾಲೇಜಿನಲ್ಲಿ ತರಬಾರದು ಇದರಿಂದ ಕೆಲವರಿಗೆ ಮುಜುಗರ ತರುವ ಸಂದರ್ಭ ಒದಗಬಹುದು ಅದ್ದರಿಂದ ಎಲ್ಲರೂ ಕಾಲೇಜಿನಲ್ಲಿ ಸಮವಸ್ತ್ರ ಧರಿಸಿ ಕಾಲೇಜಿಗೆ ಪ್ರವೇಶಿಸಬೆಡಕು
ಬುರ್ಕಾ ತೆಗೆದು ಕಾಲೇಜು ಸಮವಸ್ತ್ರ ಧರಿಸಿ ಕಾಲಜು ಪ್ರವೇಶ ಮಾಡಿದರೆ ನಾವುಗಳು ಕೂಡ ಕಾಲೇಜು ಸಮವಸ್ತ್ರ ಧರಸಿ ಬರುತ್ತೇವೆ ಎಂದರು.
ಇದರ ಇತ್ಯರ್ಥ ಕೊನೆಯಾಗದಿದ್ದರೆ
ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಸರಿ ಶಾಲು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಾಂಶುಪಾಲ ಪುಟ್ಟರಾಜು ಮಾತನಾಡಿ
ಬುದ್ದ, ಬಸವ ,ಅಂಬೇಡ್ಕರ್, ಅವರ ತತ್ವ ಆದಾರದ ಮೇಲೆ ಜಾತಿ, ರಾಜಕಾರಣ ಹೆಸರಿನಲ್ಲಿ ವಿದ್ಯಾರ್ಥಿಗಳು ರಾಜಕೀಯ ಮಾಡಬಾರದು ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮವಸ್ತ್ರ ಹಾಕಿಕೊಂಡು ಬರಬೇಕು. ಯಾರೂ ಕೂಡ ತಮ್ಮ ಧರ್ಮದ ಹೆಸರಿನಲ್ಲಿ ಸಮವಸ್ತ್ರ ಧರಿಸಿ ಕಾಲೇಜಿಗೆ ಬಂದು ಶಾಂತಿಗೆ ಬಂಗ ತರುವ ಕೆಲಸ ಮಾಡಬಾರದು ಹಾಗೂ ತಮ್ಮ ಭವಿಷ್ಯವನ್ನು ಹಾಳು ಮಾಡುವ ಕಾರ್ಯಕ್ಕೆ ವಿಧ್ಯಾರ್ಥಿಗಳು ಕೈ ಹಾಕಬಾರದು.
ಸಮವಸ್ತ್ರ ವಿಚಾರವಾಗಿ ಪ್ರಕರಣ ದಾಖಲಾಗಿದ್ದು ತೀರ್ಪು ಬಂದ ನಂತರ ಸರ್ಕಾರದ ಆದೇಶವನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪಾಲಿಸುವುದಕ್ಕೆಬದ್ಧರಾಗಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಹೆಚ್ಚಿನ ಅಹಿತಕರ ಘಟನೆ ಆಗದಂತೆ ಸಮಯಕ್ಕೆ ಸರಿಯಾಗಿ ಪೊಲೀಸರು ಬಂದು ಪ್ರತಿಭಟನೆ ನಿರತ ಕಾಲೇಜು ವಿಧ್ಯಾರ್ಥಿಗಳನ್ನು ಕಾಲೇಜಿನ ಒಳಗಡೆ ಕಳುಹಿಸುವಲ್ಲಿ ಯಶಸ್ವಿಯಾದರು.

Post Comment

You May Have Missed