ಕೃತ್ಯ ತಂಡದಿಂದ ಕಾರ್ಮಿಕರ ದಿನಾಚರಣೆ.
ಮೈಸೂರಿನ ಧ್ವನಿ ಸ್ಟುಡಿಯೋಸ್ ಸಂಸ್ಥೆಯು ನಿರ್ಮಿಸುತ್ತಿರುವ ” ಕೃತ್ಯ ” ಕನ್ನಡ ಚಲನಚಿತ್ರಕ್ಕಾಗಿ 2022 ಮೇ 1 ರಂದು ಹೂಟಗಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಡಿಷನ್ ಕಾರ್ಯಕ್ರಮದಲ್ಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಚಿತ್ರರಂಗದ ಕಾರ್ಮಿಕರಾದ ಫೈಟರ್ ಜಯರಾಮ್ , ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಸೋಮ ಸುಂದರ ಮೂರ್ತಿ , ವಿನ್ಯಾಸಕ ದೇವು , ಕಲಾವಿದ ಮಂಜುನಾಥರವರನ್ನು ಸನ್ಮಾನಿಸಲಾಯಿತು. ” ಕೃತ್ಯ ” ಚಿತ್ರದ ನಾಯಕನಟ ಹಾಗೂ ನಿರ್ದೇಶಕ ಆಸ್ಕರ್ ಕೃಷ್ಣ , ನಿರ್ಮಾಪಕಿ ಶ್ವೇತಾ ಮಡಪ್ಪಾಡಿ , ಸಹ ನಿರ್ದೇಶಕಿ ಸುಲೇಖಾ ಮಾಳಿಯಕ್ಕಲ್ , ರಂಗ ಕಲಾವಿದೆ ದೇವಜನ ಗೀತಾ ಮೊಂಟಡ್ಕಾ , ಸಹ ನಿರ್ಮಾಪಕ ಗೌತಮ್ ರಾಮಚಂದ್ರ , ಕಾರ್ಯಕಾರಿ ನಿರ್ಮಾಪಕ ರಕ್ತದಾನಿ ಮಂಜು ವಿ ಹಾಜರಿದ್ದರು.

Post Comment