Loading Now

ಕಾಸರಗೋಡಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ “777 ಚಾರ್ಲಿ” ಸಿನಿಮಾ ತೋರಿಸಲು ಮುಂದಾದ ಕಿರಣ್ ರಾಜ್.

ಇತ್ತೀಚೆಗೆ ತೆರೆಕಂಡು, ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವ ಚಿತ್ರ “777 ಚಾರ್ಲಿ”.

ಈ ಚಿತ್ರದ ನಿರ್ದೇಶಕ ಕಿರಣ್ ರಾಜ್ ಕಾಸರಗೋಡಿನವರು. ತಮ್ಮೂರಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರವನ್ನು ತೋರಿಸುವ ಹಂಬಲ ನಿರ್ದೇಶಕರಿಗೆ. ಈ ವಿಷಯವನ್ನು ಕಾಸರಗೋಡಿನ ಡಿಡಿಇ ಅವರಿಗೆ ಕಿರಣ್ ರಾಜ್ ಲಿಖಿತವಾಗಿ ತಿಳಿಸಿದರು. ನಿರ್ದೇಶಕರ ಮನವಿಗೆ ಸ್ಪಂದಿಸಿರುವ ಡಿಡಿಇ ಅವರಿಂದ ಉತ್ತಮ ಸ್ಪಂದನೆ ದೊರಕಿದೆ.

ಕಾಸರಗೋಡಿನ ಮೆಹಬೂಬ್ ಚಿತ್ರಮಂದಿರದವರು ರಿಯಾಯಿತಿ ದರದಲ್ಲಿ “777ಚಾರ್ಲಿ” ಚಿತ್ರವನ್ನು ತೋರಿಸಲು ಮುಂದಾಗಿದ್ದಾರೆ. 130 ರೂಪಾಯಿ ಟಿಕೇಟ್ ದರವಿದ್ದು, ವಿದ್ಯಾರ್ಥಿಗಳಿಗೆ 80 ರೂಪಾಯಿಗೆ ಟಿಕೇಟ್ ನೀಡಲು ನಿರ್ಧರಿಸಲಾಗಿದೆ. ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆತರುವ ಅಧ್ಯಾಪಕರಿಗೆ ಉಚಿತ ಪ್ರವೇಶವಿರುತ್ತದೆ.

ಈ ವಿಷಯದ ಕುರಿತು ಧನಾತ್ಮಕವಾಗಿ ಸ್ಪಂದಿಸಿರುವ ಡಿಡಿಇ ಹಾಗೂ ಚಿತ್ರಮಂದಿರ ಮಾಲೀಕರಿಗೆ ನಿರ್ದೇಶಕ ಕಿರಣ್ ರಾಜ್ ಧನ್ಯವಾದ ತಿಳಿಸಿದ್ದಾರೆ.

Post Comment

You May Have Missed