ಕಾಂತರಾಜು ಸೇವಾ ಬಳಗದ ವತಿಯಿಂದ ಮಕ್ಕಳಿಗೆ ಹಾಲು ವಿತರಿಸಿ ಪಂಚಮಿ ಹಬ್ಬ ಆಚರಣೆ..
ಮೈಸೂರಿನ ಆಗಸ್ಟ್ 02 -ಗಾಂಧಿನಗರದ ಉರಿಲಿಂಗ ಪೆದ್ದಿ ಮಠದ ಆವರಣದಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಪಂಚಮಿ ಹಬ್ಬ ಆಚರಿಸಲಾಯಿತು ಇದೇ ಸಂದರ್ಭದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರು ಮಾತನಾಡಿ ಅಜ್ಞಾನ ಮತ್ತು ಅಂಧಕಾರವನ್ನು ನಿವಾರಿಸುವ ಶಕ್ತಿ ಜ್ಞಾನಕ್ಕೆ ಇದೆ.ನುಡಿಗಳಲ್ಲಿ ಜ್ಞಾನಪ್ರಕಾಶ ವಿದ್ದರೆ ಅಜ್ಞಾನ ಅಂಧಕಾರ ಗಳು ಪಲಾಯನ ಮಾಡುತ್ತವೆ.ಕಲ್ಲು ನಾಗರಿಕೆ ಹಾಲು ನೀಡುವ ಬದಲು ಮಕ್ಕಳಿಗೆ ನೀಡಿದರೆ ದೇಹ ವೃದ್ಧಿ ಹಾಗೂ ಪೌಷ್ಟಿಕತೆ ಹೆಚ್ಚುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಕಾಂತರಾಜು ಸೇವಾ ಬಳಗ ಅಧ್ಯಕ್ಷರಾದ ಚೇತನ್ ಕಾಂತರಾಜು ಮಾತನಾಡಿ ನಾಗರಪಂಚಮಿ ಹಬ್ಬದ ನಿಮಿತ್ತ ಅನೇಕರು ಕಲ್ಲುನಾಗರ ಗಳಿಗೆ ಇಲ್ಲವೇ ಹುತ್ತದಲ್ಲಿ ಹಾಲು ಸುರಿಯುವುದು ವಾಡಿಕೆ. ಇದು ಅವರವರ ಧಾರ್ಮಿಕ ನಂಬಿಕೆ ಎನ್ನುವುದು ನಿಜ. ಆದರೆ, ವೈಜ್ಞಾನಿಕವಾಗಿ ನೋಡಿದರೆ ಹಾವುಗಳು ಹಾಲನ್ನಾಗಲೀ, ಹಾಲಿನ ಉತ್ಪನ್ನಗಳನ್ನಾಗಲೀ ಸೇವಿಸುವುದಿಲ್ಲ. ಹಾಗಾಗಿ, ಪಂಚಮಿಯಂದು ಪೌಷ್ಟಿಕಾಂಶಗಳ ಆಗರವಾಗಿರುವ ಹಾಲನ್ನು ಹುತ್ತದಲ್ಲಿ ಸುರಿಯುವ ಬದಲು ಹಸಿದವರಿಗೆ ನೀಡುವುದು ಉತ್ತಮ.
ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು,ಸವಿತಾ ಬಸವಪ್ರಿಯ ಸ್ವಾಮೀಜಿ, ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮಿ,ಗ್ರಾಮ ಪಂಚಾಯಿತಿ ಸದಸ್ಯ ಮಹಾಂತಪ್ಪ,ಪರಶುರಾಮ್ ಮರಿದೇವರು, ಲಕ್ಷ್ಮಣ್ ಮುಂತಾದವರು ಭಾಗವಹಿಸಿದ್ದರು.

Post Comment