Loading Now

ಕರ್ನಾಟಕ ಪಬ್ಲಿಕ್ ಶಾಲೆಯ 200 ಲಕ್ಷ ರೂಗಳ ಕೊಠಡಿಗಳ ನಿರ್ಮಾಣ

ರಾವಂದೂರು:-ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕಿನ ಹೋಬಳಿ ಕೇಂದ್ರವೆಂದರೆ ಅದು ರಾವಂದೂರು ಎಂದು ಹೇಳುವ ಪರಿಸ್ಥಿತಿ   ಈಗ ದೂರವಾಗಿದೆ ಹೀಗೆ ಮತದಾರರ ಸಹಕಾರವಿದ್ದರೆ ಸಂಪೂರ್ಣ ಅಭಿವೃದ್ಧಿಗೆ ಸಹಕರಿಸುವುದಾಗಿ ಶಾಸಕ ಕೆ ಮಹದೇವ್ ತಿಳಿಸಿದರು. ಇವರು ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ 200 ಲಕ್ಷ ರೂಗಳ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.     ಪಬ್ಲಿಕ್ ಶಾಲೆ ಈ ಹೋಬಳಿ ಕೇಂದ್ರ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು ಕರ್ನಾಟಕದ ಯಾವುದೇ ತಾಲೂಕಿಗೂ ಎರಡು ಪಬ್ಲಿಕ್ ಶಾಲೆಗಳನ್ನು ನೀಡದ ಅಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ನಮ್ಮ ತಾಲೂಕಿಗೆ ನನ್ನ ಮೇಲೆ ಒಲವಿಟ್ಟು ಎರಡು ಪಬ್ಲಿಕ್ ಶಾಲೆಗಳನ್ನು ಮಂಜೂರಾತಿ ನೀಡುವ ಮೂಲಕ ಈ ಹೋಬಳಿ ಕೇಂದ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಹಾಗೂ ನಾನು ಶಾಸಕನಾಗಿ ಬಂದಮೇಲೆ  ಈ ಹೋಬಳಿ ಕೇಂದ್ರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಿದ್ದು ಅದರಲ್ಲೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಮೂಲಕ  ಮಕ್ಕಳ ಶಿಕ್ಷಣಕ್ಕೆ ಕೊರತೆಯಾಗಬಾರದೆಂದು ಈ ಪಬ್ಲಿಕ್ ಶಾಲೆಗೆ ಈಗಾಗಲೇ ಸುಮಾರು ನಾಲ್ಕುವರೆ ಕೋಟಿ ರೂ ವೆಚ್ಚದ ಕೊಠಡಿಗಳ ನಿರ್ಮಾಣ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚುವರಿ ಕೊಠಡಿಗಳಿಗೆ  ಹಂತಹಂತವಾಗಿ ಹಣವನ್ನು ಮಂಜೂರು ಮಾಡಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗಲೆಂದು ಶ್ರಮಿಸುತ್ತಿದ್ದೇನೆ ಇದಕ್ಕೆ ಪ್ರತಿಯೊಬ್ಬರ ಸಹಕಾರ ನೀಡಬೇಕೆಂದರು. ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ ವಿದ್ಯಾರ್ಥಿಗಳು:-ಇತ್ತೀಚಿನ ದಿನಗಳಲ್ಲಿ ಸರ್ಕಾರದ ಪ್ರತಿಯೊಂದು ಶಾಲೆಯು ಖಾಸಗಿ ಶಾಲೆಗಳಿಗಿಂತ ಉತ್ತಮ ಕಟ್ಟಡಗಳನ್ನು ಹಾಗೂ ಇಂಗ್ಲಿಷ್ ಬೋಧನೆ ಹಾಗೂ ವಿವಿಧ ಸೌಲಭ್ಯಗಳನ್ನು ಹೊಂದಿರುವುದರಿಂದ ಪ್ರತಿ ಸರ್ಕಾರಿ ಶಾಲೆಗಳತ್ತ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಬರುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ. ಇದಕ್ಕನುಗುಣವಾಗಿ ಪ್ರತಿಯೊಬ್ಬ ಶಿಕ್ಷಕರು ಶ್ರಮವಹಿಸಿ ಬೋಧಿಸಿದರೆ ಸರ್ಕಾರಿ ಶಾಲೆಗಳನ್ನು ಇನ್ನು ಹೆಚ್ಚು ಅಭಿವೃದ್ಧಿಪಡಿಸಬಹುದು ಎಂದರು. ಹಾಗೂ ಗುತ್ತಿಗೆದಾರರು ನಿರ್ಮಿಸಲಾದ ಯಾವುದೇ ಕಟ್ಟಡಗಳ ಕಾಮಗಾರಿಗಳು ಸುಸಜ್ಜಿತವಾಗಿರಬೇಕು ನಿರ್ಮಾಣಕ್ಕೆ ಬಳಸಲ್ಪಡುವ ವಸ್ತುಗಳು ಉತ್ತಮವಾಗಿದ್ದು ಹೆಚ್ಚು ವರ್ಷಗಳ ತನಕ ಬಾಳಿಕೆ ಬರುವಂತೆ ನಿರ್ಮಿಸಿಕೊಡಬೇಕೆಂದು ತಿಳಿಸಿದರು.ಪ್ರಾಂಶುಪಾಲರಾದ ಶಿವಶಂಕರ್ ಮಾತನಾಡಿಪ್ರತಿವರ್ಷವೂ ನಮ್ಮ ಪಬ್ಲಿಕ್ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚುತ್ತಿದ್ದು ಸುಮಾರು 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಮುಂದಿನ ವರ್ಷದಿಂದ ಎಲ್ ಕೆ ಜಿ ಯಿಂದ 12ನೇ ತರಗತಿಯವರೆಗೆ ಒಂದೇ ಕ್ಯಾಂಪಸ್ ನಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದರು.       ಈ ಸಂದರ್ಭದಲ್ಲಿ ತಾಲೂಕು ತಹಸಿಲ್ದಾರ್ ಚಂದ್ರಮೌಳಿ ಕಾರ್ಯನಿರ್ವಹಣಾಧಿಕಾರಿ ಸಿ. ಕೃಷ್ಣ ಕುಮಾರ್ , ಬಿಇಓ ತಿಮ್ಮೇಗೌಡ, ಉಪಪ್ರಾಂಶುಪಾಲ ಸುರೇಶ್ ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮಾಜಿ ಜಿಪಂ ಸದಸ್ಯ ಶಿವಣ್ಣ ಎಇಇಗಳಾದ ಜಯಂತ್, ಮಂಜುನಾಥ್, ಮುಖಂಡರಾದ ಮಲ್ಲೇಶ್, ಮಹದೇವ್, ಮರಿಗೌಡ, ದಿನೇಶ್, ಗುತ್ತಿಗೆದಾರ ಸಂತೋಷ್, ಹಾಗೂ ಉಪನ್ಯಾಸಕರು ಶಿಕ್ಷಕರು ಮತ್ತು ಸಾರ್ವಜನಿಕರು ಹಾಜರಿದ್ದರು.ಫೋಟೋ ವಿವರಆರ್.ವಿ.ಡಿ(04) ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ 200 ಲಕ್ಷ ವೆಚ್ಚದ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ  ಶಾಸಕ ಕೆ. ಮಹದೇವ್ ಗುದ್ದಲಿಪೂಜೆ ನೆರವೇರಿಸಿದರು.

ReplyForward

Post Comment

You May Have Missed