ಕರೋನಾ ವೀರರಂತೆ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸಿದರು ಎಂದು ಪುರಸಭೆ ಮುಖ್ಯಾಧಿಕಾರಿ ಜಿ. ಗಿರೀಶ್.
ತಿ.ನರಸೀಪುರ. ಸೆ.30:-ನಗರವನ್ನು ನಿತ್ಯವೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ಕರೋನಾ ಸಂದರ್ಭದಲ್ಲಿಯೂ ಸಹ ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಕರೋನಾ ವೀರರಂತೆ ಕರ್ತವ್ಯ ನಿರ್ವಹಿಸಿದ್ದಾರೆ ಅವರನ್ನು ಪ್ರತಿ ಯೊಬ್ಬರು ಗೌರಸಿದರೆ ಅವರಿಗೆ ನಾವುಗಳು ಸಲ್ಲಿಸುವ ನಿಜವಾದ ಸನ್ಮಾನ ವಾಗಿರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಜಿ. ಗಿರೀಶ್ ನುಡಿದರು.
ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಪೌರ ಕಾರ್ಮಿಕರ ದಿನಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಿತ್ಯವೂ ಬೆಳಗಿನ ಜಾವ ನಗರವನ್ನು ಸ್ವಚ್ಛ ಗೊಳಿಸುವ ಮೂಲಕ ಸಾರ್ವಜನಿಕರನ್ನು ನಾನಾ ಸಾಂಕ್ರಮಿಕ ರೋಗಗಳಿಂದ ರಕ್ಷಣೆ ಮಾಡುತ್ತಿ ರುವ ಪೌರ ಕಾರ್ಮಿಕರ ನಿಸ್ವಾರ್ಥ ಕರ್ತವ್ಯಕ್ಕೆ ಗೌರವ ಸಲ್ಲಿಸುವ ಕೆಲಸ ಎಲ್ಲರು ಮಾಡಬೇಕು ಎಂದರಲ್ಲದೆ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು ನೀವು ಆರೋಗ್ಯದಿಂದ ಇದ್ದರೆ ಮಾತ್ರ ಸಮಾಜ ಆರೋಗ್ಯದಿಂದ ಇರಲು ಸಾಧ್ಯ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಗಿರೀಶ್ ಪೌರ ಕಾರ್ಮಿಕರು ಅಧಿಕಾರಿಗಳ ದೇಹದ ಕೈ ಕಾಲು ಗಳಿದಂತ್ತೆ ಕೈ ಕಾಲುಗಳು ಗಟ್ಟಿಯಾಗಿದ್ದರೆ ದೇಹ ಚಲಿಸಲು ಹೇಗೆ ಸಾಧ್ಯವಾಗುತ್ತದೊ ಹಾಗೆ ಪೌರ ಕಾರ್ಮಿಕರು ಉತ್ತಮ ಕೆಲಸ ಮಾಡಿದರೆ ಮಾತ್ರ ಪುರಸಭೆ ಅಧಿಕಾರಿ ವರ್ಗ ಮತ್ತು ಚುನಾಯಿತ ಮಂಡಳಿಗೆ ಉತ್ತಮ ಹೆಸರು ಬರಲು ಸಾಧ್ಯ ಹಾಗಾಗಿ ಪುರಸಭೆಗೆ ಯಾವುದೇ ಉತ್ತಮ ಹೆಸರು ಬಂದರು ಅದಕ್ಕೆ ಪೌರ ಕಾರ್ಮಿಕರು ಮೂಲ ಕಾರಣವಾಗಿರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಕೆಲಸ ಮಾಡಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು ಹಾಗೂ ಸಮ ವಸ್ತ್ರ ನೀಡಲಾಯಿತು.
ಬಾಕ್ಸ್ ಸುದ್ದಿ.”ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ ಮನೋಭಾವ ದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ನಾವೇಲ್ಲರು ಪ್ರತಿಕ್ಷಣವು ತಾಯ್ತನದಿಂದ ಕಾಣುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ “
ಪುರಸಭೆ ಸದಸ್ಯೆ ರೂಪಶ್ರೀ.ಪೌರ ಕರ್ಮಿಕರ ಹಲವಾರು ವರ್ಷಗಳ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣದ ಜಾಗಕ್ಕೆ ಈ ಬಾರಿ ಇತಿಶ್ರೀ ಹಾಡಲಾಗುವುದು ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಪುರಸಭೆಯ ಸಾಮನ್ಯ ಸಭೆಯಲ್ಲಿ ಸದಸ್ಯರ ನಿರ್ಣಯ ದೊಂದಿಗೆ ನಿಯಮಾ ಪಾಲಿಸಿ ಜಾಗ ಮುಂಜೂರು ಮಾಡಿಕೂಡಲಾಗುವುದು”ಪುರಸಭೆ ಮುಖ್ಯಾಧಿಕಾರಿ. ಜಿ.ಗಿರೀಶ್.

ಈ ಸಂದರ್ಭದಲ್ಲಿ ಪುರಸಭೆ ನಿಕಟ ಪೂರ್ವ ಅಧ್ಯಕ್ಷ ಸೋಮಣ್ಣ ,ಪ್ರಭಾರ ಅಧ್ಯಕ್ಷೆ ಪ್ರೇಮ ಸದಸ್ಯರುಗಳಾದ ರೂಪಶ್ರೀ ಪರಮೇಶ್, ಮಂಜುನಾಥ್,ಬೇಬಿ ,ಪರಿಸರ ಅಭಿಯಂತರೆ ಲೋಕೇಶ್ವರಿ, ಆರೋಗ್ಯ ಅಧಿಕಾರಿ ಚೇತನ್ ಕುಮಾರ್, ಯೋಜನಾಧಿಕಾರಿ ಕೆಂಪರಾಜು, ಮಹದೇವನಾಯಕ, ಕಂದಾಯಾಧಿಕಾರಿ ಪುಟ್ಟಸ್ವಾಮಿ,ಕಿರಿಯ ಆರೋಗ್ಯಾಧಿಕಾರಿ ಮಹೇಂದ್ರ,ಸಿಬ್ಬಂದಿಗಳಾದ ರಾಜೇಂದ್ರ ಲಕ್ಷಮ್ಮ,ರವಿ,ಕರವಸೂಲಿಗಾರ ಪುಟ್ಟಸ್ವಾಮಿ ಕೃಷ್ಣಪ್ಪ ಹಾಗೂ ಇನ್ನಿತರರು ಹಾಜರಿದ್ದರು.



Post Comment