ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ದಿನಪತ್ರಿಕೆ ಕೊಂಡುಓದಿ ಅಭಿಯಾನ.
ಮೈಸೂರು ನ 02 : ಹೊಯ್ಸಳ ಟ್ರಸ್ಟ್ ವತಿಯಿಂದ ೬೮ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ದೇವರಾಜ ಮರ‍್ಕೆಟ್ ಮುಂಭಾಗ ಸರ‍್ವಜನಿಕರಿಗೆ ಕನ್ನಡ ದಿನಪತ್ರಿಕೆ ಕೊಂಡುಓದಿ ಎಂಬ ಅಭಿಯಾನವನ್ನು ಕೆಪಿಸಿಸಿ ಸದಸ್ಯರಾದ ನರ‍್ಬಾದ್ ನಟರಾಜ್ ಉದ್ಘಾಟಿಸಿದರು .
ನಂತರ ಮಾತನಾಡಿದ ಅವರು ಕನ್ನಡದ ದಿನಪತ್ರಿಕೆಗಳನ್ನೇ ಓದುವುದರಿಂದ ಸ್ಥಳೀಯ, ರಾಜ್ಯದ ಮತ್ತು ರಾಷ್ಟ್ರೀಯ ಸುದ್ದಿಗಳು ತಿಳಿಯುವುದಲ್ಲದೇ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಮತ್ತು ಕನ್ನಡ ಪತ್ರಿಕೆಗಳನ್ನು ಓದುವುದರಿಂದ ನಮ್ಮ ಪತ್ರಿಕೆಗಳು ಉಳಿದು ಅದನ್ನು ಬೆಳೆಸ ಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ
ಆದರೆ ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿದ್ದು ಅದರ ಸುದ್ದಿಗಳ ಕುರಿತು ಅಕ್ಷೇಪಣೆಗಳು ಇದೆ ಆದರೆ ದಿನ ಪತ್ರಿಕೆಗಳು ನಂಬರ‍್ಹವಾಗಿದ್ದು ಮನೆ ಮನೆಗಳಲ್ಲಿ ಮತ್ತು ಗ್ರಂಥಾಲಯಗಳಿಗೆ ತೆರಳಿ ಕನ್ನಡದ ಪುಸ್ತಕಗಳು,ಕಾದಂಬರಿಗಳನ್ನು ಓದಿ ಕನ್ನಡವನ್ನು ಬೆಳೆಸಿ ಮುಂದಿನ ಪೀಳಿಗೆಗಾಗಿ ಉಳಿಸಬೇಕಿದೆ
ಎಂದರು. ನಂತರ ಕನ್ನಡ ಧ್ವಜಾರೋಹಣ ನೆರವೇರಿಸಿ ಸಿಹಿ ವಿತರಣೆ ಮಾಡಲಾಯಿತು.
ಇದೇ ಸಂರ‍್ಭದಲ್ಲಿ ವರುಣ ಮಹದೇವ್, ಎಂ ಪಿ ರಾಜೇಶ್, ಮಂಜು ಗೌಡ, ಲೋಕೇಶ್, ಗೋಪಾಲ್, ನಾಗೇಂದ್ರ, ಹಾಗೂ ಇನ್ನಿತರರು ಭಾಗಿಯಾಗಿದ್ದರು.

Post Comment