Loading Now

ಕನ್ನಡ ಭಾಷೆಯ ಸೊಬಗು ನೋಡಣ್ಣ.

ಒಂದೇ ಒಂದು ಹೊಟ್ಟೆ ಸೀಳಲು
ಎಂಥಾ ರ‍್ಥವು ಬರುವುದಣ್ಣ
ಕಾಪಿ ಕಾಫಿ ಆಗುವುದಣ್ಣ
ದನ ಧನವಾಗಿ ನಲಿವುದಣ್ಣ

ಸೊನ್ನೆ ಒಂದನು ಮಧ್ಯೆ ಸೇರಿಸಲು
ಚಿತೆ ಚಿಂತೆ ಆಗುವುದಣ್ಣ
ಕತೆ ಕಂತೆಯಾಗಿ ಸತಿ ಸಂತಿಯಾಗಿ
ಕೊಡಿ ಕೊಂಡಿಯಾಗಿ ಎಳೆವುದಣ್ಣ

ಒತ್ತಕ್ಷರ ಹಾಕಲು ಮರೆತರೆ
ಮಾತ್ರೆ ಮಾತೆ ನೋಡಣ್ಣ
ಚಿತ್ರ ಚಿತವಾಗಿ ಉರಿವುದಣ್ಣ
ಕತ್ತೆ ಕತೆಯಾಗಿಬಿಡುವುದಣ್ಣ

ಕಾಗುಣಿತ ಸರಿಯಾಗಿರದಿದ್ದರೆ
ಬಾಗು ಬೀಗು ಆಗುವುದಣ್ಣ
ನಗು ನಾಗುವಾಗಿ ಮಗು ಮಾಗುವಾಗಿ
ಸಾಗು ಸೋಗು ರ‍್ಥ ಹೋಯಿತಣ್ಣ

ಲಕ್ಷೆ ಇಟ್ಟು ಕನ್ನಡ ಬರೆಯೋಣ
ಲಕ್ಷೆ ಇಟ್ಟು ಓದಿ ಮಾತಾಡೋಣ
ದಕ್ಷರಾಗಿ ರ‍್ಥ ತಿಳಿದು‌ ಬಳಸೋಣ
ಅಕ್ಷರ ಸಿರಿಹರಿಗೆ ನಮಿಸೋಣ

ಶ್ರೀ ಕೃಷ್ಣರ‍್ಪಣಮಸ್ತು
– ರೂಪಶ್ರೀ ಶಶಿಕಾಂತ್

Post Comment

You May Have Missed