Loading Now

ಕನ್ನಡಿಗರು ಕನ್ನಡವನ್ನು ಬಳಸಬೇಕು ತಾ.ಪಂ ಇ.ಓ ಉಮೇಶ್ .

ಯಳಂದೂರು ಮೇ 05 : ಕನ್ನಡ ನಾಡಿನಲ್ಲಿ ಕನ್ನಡಿಗರು ಮೊದಲು ಕನ್ನಡ ಭಾಷೆಯನ್ನು ಬಳಸಬೇಕು ಈ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬಹುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ರವರು ಅಭಿಪ್ರಾಯಪಟ್ಟರು

ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕ.ಸಾ.ಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು

ಕನ್ನಡ ಭಾಷೆಯನ್ನು ಕನ್ನಡಿಗರು ಇಂದು ಬಳಸುತ್ತಿಲ್ಲ, ಮಹಾನಗರಗಳಲ್ಲಿ ವಾಸಮಾಡುತ್ತಿರುವ ಜನರು ಕನ್ನಡ ಭಾಷೆಯು ಗೊತ್ತಿದ್ದರು ಬಳಸದೆ ಅನ್ಯಭಾಷೆಯಲ್ಲಿ ಮಾತನಾಡುತ್ತಾರೆ ಅದ್ದರಿಂದ ನಮ್ಮ ಭಾಷೆಯನ್ನು ನಾವೇ ಮಾತಾನಾಡಲಿಲ್ಲವೆಂದ ಹೇಗೆ ಭಾಷೆ ಬೆಳೆಯುತ್ತದೆ ಹಾಗಾಗಿ ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಬಳಸಬೇಕು ಆಮೂಲಕ ಭಾಷೆಯು ಬೆಳೆಯುತ್ತದೆ ಎಂದು ಒಂದು ನಿದರ್ಶ‌ನವನ್ನು ನೀಡಿದರು

ಕಾರ್ಯಕ್ರಮವನ್ನು ತಹಶಿಲ್ದಾರ್ ಆನಂದಪ್ಪ ನಾಯಕ್ ರವರು ಉದ್ಘಾಟಿಸಿದರು ಸಮಾಜ ಸೇವಕರಾದ ದಿಗ್ಗಟ್ಟಿ ವೀರಭದ್ರಪ್ಪನವರು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು, ಸಾಹಿತಿ ಮದ್ದೂರು ದೊರೆಸ್ವಾಮಿಯವರು ಉಪನ್ಯಾಸ ನೀಡಿದರು

ಈ ಸಂಧರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಯರಿಯೂರು ನಾಗೇಂದ್ರ, ಕನ್ನಡ ಅಭಿಮಾನಿ ಬಳಗದ ಅಧ್ಯಕ್ಷರಾದ ವೈ ಸಿ ಕೃಷ್ಣಮೂರ್ತಿ , ಬಿ ಓ ಕಾಂತರಾಜು ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಜರಿದ್ದರು.

Post Comment

You May Have Missed