Loading Now

“ಏಕಮ್ “

ಬಾಲಿ ಹಾಗೂ ಏಕಮ್ ಚಿತ್ರಗಳ ಮುಹೂರ್ತ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾಮ ಹರೀಶ್ ಕ್ಲಾಪ್ ಮಾಡಿದರು.
ಗಣಿದೇವ್ ಕಾರ್ಕಳ ಈ ಎರಡೂ ಚಿತ್ರಗಳ ನಿರ್ಮಾಪಕರು ಹಾಗೂ ಬಾಲಿ ಚಿತ್ರದ ನಿರ್ದೇಶಕರು ಕೂಡ. ಏಕಮ್
ಚಿತ್ರವನ್ನು ವಿದ್ಯುತ್ ಶಿವ ನಿರ್ದೇಶಿಸುತ್ತಿದ್ದಾರೆ. ಸಂದೀಪ್ ಮಲಾನಿ ಹಾಗೂ ಮೀನಾ ಕಿರಣ್ ಮುಖ್ಯ ಪಾತ್ರದಲ್ಲಿ ಇದ್ದಾರೆ.
ಹಳ್ಳಿ ಹುಡುಗಿ ಆಗಬೇಕು ಎಂಬ ಬಯಕೆ ಹೊತ್ತು ತನ್ನ ಸಾಧನೆಯ ದಾರಿಯಲ್ಲಿ ಕಷ್ಟ ಸುಖಗಳನ್ನು ಬಾಲಿ ಸಿನಿಮಾ ಅನಾವರಣಗೊಳಿಸುತ್ತದೆ. ಕಥೆ ಚಿತ್ರಕಥೆ ಸಂಭಾಷಣೆ ರಚಿಸಿರುವ ಗಣಿದೇವ್ ಕಾರ್ಕಳ ಈ ಪಾತ್ರಕ್ಕೆ ಅಥ್ಲೆಟ್ ಆಗಿರುವ ಹರಿಣಿ ಜಯರಾಜ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂದರು.
ಏಕಮ್ ಚಿತ್ರ ಐದು ಜನರ ಪ್ರಧಾನ ಭೂಮಿಕೆ ಒಳಗೊಂಡಿದ್ದು ಲವ್ ಸೆಂಟಿಮೆಂಟ್, ಘರ್ಷಣೆ, ತಾಕಲಾಟಗಳ ಸಂಯೋಗ ಹೊಂದಿದೆ ಎಂದರು ನಿರ್ದೇಶಕ ವಿದ್ಯುತ್ ಶಿವ. ಸಾಕಷ್ಟು ಪರಿಣಿತರಾಗಿರುವ ವಿದ್ಯುತ್ ಶಿವ ಇದೀಗ ಏಕಮ್ ನಿರ್ದೇಶನಕ್ಕೆ ಮುಂದಾಗಿದ್ದಾರೆ.

Post Comment

You May Have Missed