Loading Now

ಎವಿಜಿಸಿ ನೀತಿ ರೂಪಿಸಲು ಸಮಿತಿ ರಚನೆ: ಅಶ್ವತ್ಥ ನಾರಾಯಣ

ಬೆಂಗಳೂರು: ಪ್ರವರ್ಧಮಾನಕ್ಕೆ ಬರುತ್ತಿರುವ ಅನಿಮೇಷನ್‌, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎವಿಜಿಸಿ ನೀತಿಯನ್ನು ರೂಪಿಸಲು ಸದ್ಯವೇ ಸಮಿತಿಯನ್ನು ರಚಿಸಲಾಗುವುದು ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಗುರುವಾರ ಇಲ್ಲಿ ನಡೆದ ಜಿಎಎಫ್ಎಕ್ಸ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಡಿಪ್ಲೊಮಾ ಶಿಕ್ಷಣದಲ್ಲಿ ಈಗಾಗಲೇ ಅನಿಮೇಷನ್ ಮತ್ತು ಗೇಮಿಂಗ್ ಕಲಿಕೆಯ ಕೋರ್ಸನ್ನು ಅಳವಡಿಸಿ ಕೊಳ್ಳಲಾಗಿದೆ. ಹಾಗೆಯೇ ಎಂಜಿನಿಯರಿಂಗ್ ಶಿಕ್ಷಣದ ಪಠ್ಯಕ್ರಮವನ್ನು ಪೂರ್ಣವಾಗಿ ಪರಿಷ್ಕರಿಸಿ, ಹೊಸ ರೂಪ ನೀಡಲಾಗಿದೆ ಎಂದರು.
ಎನ್ಇಪಿಯಲ್ಲಿ ಎವಿಜಿಸಿ ತರಹದ ಅತ್ಯಾಧುನಿಕ ಜ್ಞಾನಧಾರೆಗಳ ಕಲಿಕೆಗೆ ಒತ್ತು ಕೊಡಲಾಗಿದೆ. ನಾವು ಸಮಯವನ್ನು ವ್ಯರ್ಥ ಮಾಡದೆ, ಉದ್ಯಮದ ಬೇಡಿಕೆಗೆ ತಕ್ಕಂತೆ ಕಲಿಕೆಯನ್ನು ಸಾಧ್ಯವಾಗಿಸಬೇಕು. ಇದರಿಂದ ಅವಕಾಶಗಳ ಲಾಭ ರಾಜ್ಯದ ಯುವಜನರಿಗೆ ಸಿಗಲಿದೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಸಿನಿಮಾ, ಮನೋರಂಜನೆ ಮತ್ತು ಮಾಧ್ಯಮ ಕ್ಷೇತ್ರಗಳು ಅಗಾಧವಾಗಿ ಬೆಳೆಯುತ್ತಿವೆ. ಇವೆಲ್ಲವೂ ಜಾಗತಿಕ ಗುಣಮಟ್ಟ ಕಾಪಾಡಿಕೊಳ್ಳಲು ಶ್ರಮಿಸಬೇಕು. ಸದ್ಯದಲ್ಲೇ ಬರಲಿರುವ ಎವಿಜಿಸಿ ನೀತಿಯು ಇದನ್ನು ಸಾಧ್ಯವಾಗಿಸಲಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕೆಡಿಇಎಂ ಸಿಇಒ ಸಂಜೀವ್ ಗುಪ್ತ ಅವರು ಉಪಸ್ಥಿತರಿದ್ದರು.

Previous post

ಕರ್ನಾಟಕದಲ್ಲಿ ಜನಸಂಘ ಮತ್ತು ಭಾ.ಜ.ಪ ಕಟ್ಟಿ ಬೆಳೆಸುವಲ್ಲಿ ಜಗನ್ನಾಥ ರಾವ್ ಜೋಶಿ ಅವರದ್ದು ಪ್ರಮುಖ ಪಾತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

Next post

57 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಮಧ್ಯಕರ್ನಾಟಕದಲ್ಲಿ ನೀರಾವರಿ ಕ್ರಾಂತಿ !

Post Comment

You May Have Missed