Loading Now

ಉತ್ತಮ ನಿರ್ವಹಣೆ ಮಾಡುವ ಮೂಲಕ ವಾಹನಗಳು ದೀರ್ಘಕಾಲ ಬಾಳ್ವಿಕೆಗೆ ಬರುವಂತ್ತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿಗಳ ಮೇಲಿದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್

ತಿ.ನರಸೀಪುರ. ಅ.27:-ಉತ್ತಮ ನಿರ್ವಹಣೆ ಮಾಡುವ ಮೂಲಕ ವಾಹನಗಳು ದೀರ್ಘಕಾಲ ಬಾಳ್ವಿಕೆಗೆ ಬರುವಂತ್ತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿಗಳ ಮೇಲಿದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್  ತಿಳಿಸಿದರು.
ಪಟ್ಟಣದ ತಾ.ಪಂ.ಆವರಣದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು ಖರೀದಿಸಿರುವ ಕಸ ಸಂಗ್ರಹಿಸುವ ವಾಹನಗಳ ಕಾರ್ಯಾರಂಭಕ್ಕೆ ಹಸಿರು ನಿಶಾನೆ  ತೋರಿಸುವುದರ ಮೂಲಕ ಶುಭ ಹಾರೈಸಿ ಮಾತನಾಡಿದರು.
ಸ್ವಚ್ಚ ಭಾರತದ ಕನಸಿಗೆ ಅತಿ ಹೆಚ್ಚು ಒತ್ತು ಕೊಟ್ಟಿರುವ ಮತ್ತು ಅಷ್ಟೇ ಶ್ರಮ ಹಾಕಿರುವ ಗ್ರಾ.ಪಂ.ಗಳು ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಿ ಸಾಗಣಿಕೆ ಮಾಡಲು ವಾಹನಗಳನ್ನು ಖರೀದಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಹಾಗೆ ತಾವು ಖರೀದಿಸಿರುವ ವಾಹನಗಳು ದೀರ್ಘ ಕಾಲ ಬಾಳ್ವಿಕೆಗೆ ಬರುವಂತೆ ಪಂಚಾಯತಿ ಸಿಬ್ಬಂದಿಗಳು  ನಿರ್ವಹಣೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಮಾತನಾಡಿ ತಾ.ಪಂ.ವ್ಯಾಪ್ತಿಗೆ ಒಳಪಡುವ 36 ಗ್ರಾ.ಪಂ.ಗಳು ಸ್ಚಚ್ಚ ಭಾರತ್ ಮಿಷನ್ ಮತ್ತು 15 ನೇ ಹಣಕಾಸು ಅನುಧಾನದಲ್ಲಿ ಸುಮಾರು 5.36 ಲಕ್ಷ ರೂಗಳಲ್ಲಿ ಒಂದೊಂದು ವಾಹನವನ್ನು ಖರೀದಿ ಮಾಡಿದ್ದಾರೆ ಈ ವಾಹನದ ಮೂಲಕ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ಕಸ ವಿಲೇವಾರಿ ಘಟಕ್ಕೆ ಸಾಗಾಣಿಕೆ ಮಾಡಲಾಗುತ್ತದೆ ಎಂದರು.
ಪಂಚಾಯಿತಿಯು ಪ್ರತಿ ಮನೆಗೆ ಎರಡು ಕಸದ ಡಬ್ಬಿಗಳನ್ನು ನೀಡುತ್ತದೆ. ಒಂದರಲ್ಲಿ ಹಸಿ ಕಸ ಮತ್ತು ಮತ್ತೊಂದರಲ್ಲಿ ಒಣ ಕಸ ಸಂಗ್ರಹ ಮಾಡಲು ತಿಳಿಸಲಾಗುತ್ತದೆ  ಪಂಚಾಯಿತಿಯ ಕಸ ಸಂಗ್ರಹಿಸುವ ವಾಹನ ಮನೆ ಮನೆಗೆ ತೆರಳಿ ಕಸವನ್ನು ತೆಗೆದು ಕೊಂಡು ಕಸ ವಿಲೇವಾರಿ ಘಟಕ್ಕೆ ಒಯ್ಯಲಾಗುತ್ತದೆ.ಅಲ್ಲಿ ಕಸವನ್ನು ಮತ್ತೆ ವಿಂಗಡನೆ ಮಾಡಿ ನಂತರ ವಿಲೇವಾರಿ ಮಾಡಲಾಗುತ್ತದೆ ಎಂದರು  

ಕಸ ವಿಂಗಡಣೆಯ ಘಟಕಗಳ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಗುರುತು ಮಾಡಲಾಗಿದೆ ಕೆಲವು ಪಂಚಾಯತಿಗಳು ಈಗಾಗಲೇ ವಿಲೇವಾರಿ ಘಟಕ ನಿರ್ಮಾಣ ಮಾಡಿವೆ ಕೆಲವು ಪಂಚಾಯತಿಗಳು ಕಸ ವಿಲೇವಾರಿ ಘಟಕ ನಿರ್ಮಾಣದ ಹಂತದಲ್ಲಿವೆ ಎಂದರಲ್ಲದೆ ಪ್ರತಿ ಗ್ರಾ.ಪಂ.ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಚತೆ ಮತ್ತು ಬಯಲು ಮುಕ್ತ ಶಾಚಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿವೆ ಹಾಗೆ ಜನರಲ್ಲೂ ಸಹ ಸ್ವಚ್ಚತೆ ಬಗ್ಗೆ ನಿರಂತರವಾಗಿ ಹರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.  
ಬಾಕ್ಸ್ ಸುದ್ದಿ.“ಹಳ್ಳಿ ಜನರು ಹಸಿ ಕಸವನ್ನು ತಿಪ್ಪೆಗೆ ಹಾಕಿ, ಒಣ ಕಸವನ್ನು(ಪ್ಲಾಸ್ಟಿಕ್‌) ಪಂಚಾಯಿತಿ ಗಾಡಿಯಲ್ಲಿ ಹಾಕಿದರೆ ಊರುಕೇರಿಯೂ ಸ್ವಚ್ಛವಾಗಿ ಇರುತ್ತದೆ”ಕೃಷ್ಣ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ.
ಈ ಸಂದರ್ಭದಲ್ಲಿ ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ,ಮೇಗಡಹಳ್ಳಿ ದ್ವಾರಕೇಶ್,ಮಾಜಿ ಜಿ.ಪಂ.ಸದಸ್ಯ ಜೈಪಾಲ್ ಭರಣಿ ,ನರೇಗಾ ಸಹಾಯಕ ನಿರ್ದೇಶಕ ಮಹದೇವ್ ಸೇರಿದಂತೆ ತಾ.ಪಂ.ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಹಾಜರಿದ್ದರು

Previous post

ಡಾ.ಬಾಬು ಜಗ ಜೀವನ್ ರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುಧಾನ ಬಿಡುಗಡೆ ಮಾಡಿಸಲು ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ರವರ ಶ್ರಮ ಅತಿ ಹೆಚ್ಚಿನದು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮೆಚ್ಚುಗೆ.

Next post

ಪುರಸಭೆ ಸದಸ್ಯರ ಗೈರು ಹಾಜರಿಯಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳತೆಯಲ್ಲಿ ಸರಳವಾಗಿ  ಆಚರಣೆ ಮಾಡಿದ ಪುರಸಭೆ ಅಧಿಕಾರಿಗಳು.

Post Comment

You May Have Missed