ಉಚಿತ ರೆಬಿಸ್ ಲಸಿಕಾ !
ಹನೂರು ಅಕ್ಟೋ 07 : ಪಟ್ಟಣದ ಪಶುವೈದ್ಯ ಕೀಯ ಆಸ್ವತ್ರೆ ಆವರಣದಲ್ಲಿ ಶ್ವಾನಗಳಿಗೆ ಉಚಿತ ರೆಬಿಸ್ ಲಸಿಕಾ ಕಾರ್ಯಕ್ರಮಕ್ಕೆ ಡಾ ಸಿದ್ದರಾಜುರವರು ಚಾಲನೆ ನೀಡಲಾಯಿತು.
ಹನೂರು ತಾಲ್ಲೂಕಿನ ಸಹಾಯಕ ನಿರ್ದೇಶಕರ ಡಾ ಸಿದ್ದರಾಜುರವರು ಮಾತನಾಡಿ ಹನೂರು ಪಟ್ಟಣದಲ್ಲಿ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ಏರ್ಪಡಿಸಿದ್ದು ಸಾರ್ವಜನಿಕರು ಶ್ವಾನಗಳಿಗೆ ಕೊಡಿಸಬೇಕು ಎಂದು ತಿಳಿಸಿದರು.
ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಂದು ವಾರದ ಹಿಂದಿನಿಂದ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು ಕೆಲವರ ಮೇಲೆ ದಾಳಿ ನಡೆಸಿ ಗಾಯಮಾಡಿದ್ದವು.
ಪಶುಪಾಲನಾ ಇಲಾಖೆ ಮಾರ್ಟಳ್ಳಿ ಗ್ರಾಮ ಇವರ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ವತಿಯಿಂದ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ ಅಭಿಯಾನವನ್ನು ಮಾಡಲಾಯಿತು . ಶ್ವಾನಗಳಿಗೆ ಲಸಿಕೆ ಕೊಡಿಸಿದ ಗ್ರಾಮಸ್ಥರು ಕುಮಾರ್ ದಯಾಳ್ ಅವರು ಸಾಕಿರುವ ಜರ್ಮನ್ ಶೆಫರ್ಡ್ ಹಾಗೂ ಶ್ರೀ ಜಾಯ್ ರವರು ಸಾಕಿರುವ ರೊಟ್ಟೀಲರ್ ತಳಿಯ ಶ್ವಾನಕ್ಕೆ ಲಸಿಕೆ ಕೊಡಿಸಿದರು.

Post Comment