ಆಯುಕ್ತರಿಂದ ಬೊಮ್ಮನಹಳ್ಳಿ ವಲಯದಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರು: ಮುಖ್ಯ ಆಯುಕ್ತರು ರವರು ಇಂದು ಅಪರಾಹ್ನ 3-00 ರಿಂದ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಬಿ.ಡಿ.ಎ ಸಂಕೀರ್ಣದ ವಲಯ ಕಛೇರಿಯಲ್ಲಿ ಮಾನ್ಯ ಶಾಸಕರ ಉಪಸ್ಥಿತಿಯಲ್ಲಿ ಹಾಗೂ ಬಿಬಿಎಂಪಿ ಮತ್ತು ಬಿಡ್ಲ್ಯುಎಸ್ಎಸ್ ಬಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸದರಿ ಸಭೆಯಲ್ಲಿ ಪ್ರಮುಖವಾಗಿ ಮಳೆಯ ಸಂದರ್ಭದಲ್ಲಿ ಹೆಚ್ವು ನೀರು ರಾಜಕಾಲುವೆ ಗಳಲ್ಲಿ ಹರಿಯುವ ಜೊತೆಗೆ ಕೆಲ ವಾಸ ಪ್ರದೇಶ/ಬಡಾವಣೆಗಳಲ್ಲಿ ಉದಾ: ಬಿಳೇಕಹಳ್ಳಿ, ಅನುಗ್ರಹ ಲೇಔಟ್, ಜಿಯೋ ಲೇಔಟ್, ಹೆಚ್.ಎಸ್.ಆರ್ ಲೇಔಟ್ ..ಗಳಿಗೆ ನೀರು ಹರಿಯಲಿದ್ದು, ಆ ಅನಾಹುತಗಳು ತಪ್ಪಿಸುವ ಸಲುವಾಗಿ ಜಂಟಿಯಾಗಿ ಸಭೆ ನಡೆಸಿ ತುರ್ತು ಅಗತ್ಯ ಕ್ರಮ ಜರೂರು ವಹಿಸಲು ಸೂಚಿಸಲಾಯಿತು. ಬಿಬಿಎಂಪಿ ವತಿಯಿಂದ ರಾಜ ಕಾಲುವೆಯ ಸಾಂದ್ರತೆ ಹೆಚ್ಚಿಸಲು ಕ್ರಮ ಮತ್ತು ಅವಶ್ಯಕತೆ ಇರುವ ಕಡೆ ಪರ್ಯಾಯ ಕಿರು ಕಾಲುವೆಯ ನಿರ್ಮಾಣ, ನೀರು ಸರಾಗವಾಗಿ ಹರಿಯಲು ಕಾಲಕಾಲಕ್ಕೆ ಹೊಳು ತೆಗೆದು ನೀರು ಹರಿಯುವ ಬಗ್ಗೆ ಕ್ರಮ, ಅಲ್ಲದೇ, ಸ್ವಚ್ಚತೆ ಹಾಗೂ ಸುರಕ್ಷತಾ ಕ್ರಮ ವಹಿಸುವುದು.
ಬಿ.ಡಬ್ಲ್ಯೂ.ಎಸ್.ಎಸ್.ಬಿ ವತಿಯಿಂದ ಅವಶ್ಯಕತೆ ಇರುವ ಸ್ಥಳಗಳಲ್ಲಿ ಎಸ್.ಟಿ.ಪಿ ಘಟಕ ಗಳ ಸ್ಥಾಪನೆ ಆ ಮುಖಾಂತರ ಅಯಾ ಬಡಾವಣೆಯ ಮಲೀನ ನೀರನ್ನು ರಾಜ ಕಾಲುವೆಗೆ ಹರಿಸದೆ ಪ್ರತ್ಯೇಕವಾಗಿ ಎಸ್.ಟಿ.ಪಿ ಘಟಕಗಳ ಮೂಲಕ ಶುದ್ದೀಕರಣ ಗೊಳಿಸಿ ಮರುಬಳಕೆ ಯೋಗ್ಯ ನೀರನ್ನು ಹತ್ತಿರದ ಕೆರೆಗೆ ಹರಿಸುವ ಕಾರ್ಯ ಜರೂರಾಗಿ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಿ, ಮಳೆಯ ಸಂದರ್ಭದಲ್ಲಿ ಮಾನ್ಯಹೊಲ್ ಮುಖಾಂತರ ರಭಸವಾಗಿ ಮಲಿನ ನೀರು ರಸ್ತೆಯ ಮುಖಾಂತರ ಬಡಾವಣೆಯಲ್ಲಿ ಹರಿಯುವುದನ್ನು ತಡೆಯಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೆ.ಎಸ್.ಎಸ್.ಜಂಕ್ಷನ್ ರಾಜಕಾಲುವೆ ಪರಿಶೀಲನೆ: ಸದರಿ ಪ್ರದೇಶದ ರಾಜಕಾಲುವೆಯಲ್ಲಿ ಮಳೆಯ ಅವಧಿಯಲ್ಲಿ ಹೆಚ್ಚು ನೀರು ರಭಸವಾಗಿ ಒಮ್ಮೆಲೆ ಹರಿಯುವುದರಿಂದ ರಸ್ತೆ ಮೇಲೆ ಹಾಗೂ ಅಕ್ಕ ಪಕ್ಕದ ಬಡವಾಣೆ ನೀರಿನಿಂದ ಅವೃತ್ತವಾಗಲಿದೆ. ಪಕ್ಕದಲ್ಲೇ ಎಸ್.ಟಿ.ಪಿ ಘಟಕ ವಿದ್ದರೂ ಸಹ ಪ್ರಯೋಜನ ವಾಗುತ್ತಿಲ್ಲ, ಅದ್ದರಿಂದ ಪಕ್ಕದ ತಡೆಗೊಡೆ ಹೆಚ್ಚಿಸಲು ಕ್ರಮ ಹಾಗೂ ಸಂಬಂದಿಸಿದ ಬಡಾವಣೆಯಲ್ಲಿ ಎಸ್.ಟಿ.ಪಿ ಘಟಕಗಳ ಸೂಕ್ತ ನಿರ್ವಹಣೆ ಹಾಗೂ ಅನುಷ್ಠಾನಕ್ಕೆ ಒತ್ತು ನೀಡುವಂತೆ ತಿಳಿಸಿದರು.
ಅಗರ ಕೆರೆ ಪರಿಶೀಲನೆ: ಅಗರ ಕೆರೆ ವೀಕ್ಷಿಸಿ ಸದರಿ ಕೆರೆ ಅಭಿವೃದ್ಧಿ ಪಡಿಸಲು ರೂ: 5.00 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು, ಸದರಿ ಅಭಿವೃದ್ಧಿಯ ಕಾಮಗಾರಿಯನ್ನು ಕೂಎಲೇ ಪ್ರಾರಂಭಿಸುವಂತೆ ಸೂಚಿಸಿದರು.



Post Comment