ಆಧ್ಯಾತ್ಮಿಕತೆಯ ಸರಳತೆ !
“ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.” ಎಂದು ಸ್ವಾಮಿ ವಿವೇಕಾನಂದರು ಹೇಳಿರುವರು. ಹಾಗಾದರೆ ಇಡೀ ಜಗತ್ತೇ ನಮ್ಮ ಕೈಯಲ್ಲಿದೆ ಎಂದಾಯಿತು. ಇದನ್ನು ಸಾಧಿಸುವುದು ಹೇಗೆ? ಗುರುಗಳೇ ಉತ್ತರಿಸಬೇಕು.
“ಯೋಗ್ಯತೆ ಎಂದರೇನು? ಈ ಹಿಂದೆ ಚರ್ಚಿಸಲಾಗಿತ್ತು. ಈಗ ನಾನು ಹಿಂದಿನ ಪ್ರವಚನಗಳ ಬಗ್ಗೆ ನಿಮಗೆ ಪ್ರಶ್ನೆಗಳನ್ನು ಕೇಳಿದರೆ…. ನೀವು ತಕ್ಷಣ ಉತ್ತರಿಸಲು ಸಾಧ್ಯವಾಗುವುದಿಲ್ಲ…. ಇದಕ್ಕೆ ನಿಮ್ಮ ನಿರ್ಲಕ್ಷತನವೇ ಕಾರಣ. ಯಾವ ಸಂಧರ್ಭದಲ್ಲಿ ನಿರ್ಲಕ್ಷಿಸಬೇಕು ಯಾವಾಗ ನಿರ್ಲಕ್ಷಿಸಬಾರದು ಎಂದು ತಿಳಿದಿರಬೇಕು. ಪಾಪಿಗಳನ್ನು ಕ್ಷಮಿಸಬಹುದು ಆದರೆ ಆಧ್ಯಾತ್ಮಿಕತೆಯಲ್ಲಿ ನಿರ್ಲಕ್ಷತೆಯನ್ನು ಕ್ಷಮಿಸಲಾಗದು. ಈಗ ತಿಳಿಸುವುದನ್ನು ಗಮನವಿಟ್ಟು ಕೇಳಿರಿ.
ಆಧ್ಯಾತ್ಮಿಕ ಪ್ರಯಾಣವನ್ನು ಹೇಗೆ ಪ್ರಾರಂಭಿಸುವುದೆಂದು ನಿಮಗೆ ಹೇಳುತ್ತೇನೆ.
- ನಾವು ಹೃದಯದ ಹತ್ತಿರ ಹೋಗಬೇಕು.
- ನಾವು ಏಕೆ ಇಲ್ಲಿ ವಾಸಿಸುತ್ತಿದ್ದೇವೆ ಎಂಬುದನ್ನು ತಿಳಿಯಬೇಕು.
- ನನಗೆ ಸೇರಿರುವುದೆಂದು ಭಾವಿಸಿರುವ ಎಲ್ಲವನ್ನೂ ತ್ಯಜಿಸಿರಿ.
- ಮೌನ ಮತ್ತು ಶೂನ್ಯತೆಯನ್ನು ಆನಂದಿಸಿ.
- ಈ ಜೀವನಕ್ಕಾಗಿ ಹೆಮ್ಮೆ ಮತ್ತು ಸಮಯದೊಂದಿಗೆ ಸಂಪರ್ಕ ಹೊಂದಿರಿ.
ಈಗ ಸಿದ್ಧಿಗಳ ಬಗ್ಗೆ ಹೇಳುತ್ತೇನೆ. ಅಷ್ಟೈಶ್ವರ್ಯ ಸಿದ್ಧಿ ಹಾಗು ಮುಂತಾದ ಸಿದ್ಧಿಗಳನ್ನು 5 ಅಭ್ಯಾಸಗಳಿಂದ ಸಾಧಿಸಬಹುದು. ಮೊದಲನೆಯದ್ದು ‘ಉಳ್ಲಡಕ್ಕಂ,’ ಅಂದರೆ ಒಳ ನಿಯಂತ್ರಣ. ಉಳ್ಲ ಎಂದರೆ ಒಳ ಮತ್ತು ಅಡಕ್ಕಂ ಎಂದರೆ ನಿಯಂತ್ರಣ. ಹಾಗಾದರೆ ಒಳ ಎಂಬ ಪದದ ಅರ್ಥವೇನು? ಒಳ ಅಥವಾ ಆಂತರಿಕ ಎಂದರೆ ನಾಲ್ಕು ವಿಷಯಗಳು – ಮನಸ್ಸು, ಬುದ್ಧಿ, ಚಿತ್ತಂ, ಅಹಂ. ಎರಡನೆಯದು ‘ಉಸಿರಡಕ್ಕಂ.’ ಉಸಿರು ಎಂದರೆ ಶ್ವಾಸ. ಉಸಿರನ್ನು ನಿಯಂತ್ರಿಸುವವನು ಎಂದರ್ಥ. ಮೂರನೆಯದು ‘ನಾಗಡಕ್ಕಂ.’ ನಾಕ್ ಎಂದರೆ ನಾಲಿಗೆ (ಪದಗಳು). ಇದರ ಪ್ರಕಾರ ನಾವು ಮಾತನಾಡಬಾರದು. ಮೌನವಾಗಿ ಉಳಿಯುವುದು, ಏನನ್ನೂ ಯೋಚಿಸ ಬಾರದು, ವ್ಯಾಖ್ಯಾನಿಸಬಾರದು, ಬರೆಯ ಬಾರದು, ಚಿಹ್ನೆಗಳನ್ನು ತೋರಿಸ ಬಾರದು, ಪ್ರತಿಕ್ರಿಯಿಸ ಬಾರದು. ಇದು ಸಂಪೂರ್ಣವಾದ ಮೌನತೆ. ನಾಲ್ಕನೆಯದು ಮೈಯ್ಯಡಕ್ಕಂ. ಮೈ ಎಂದರೆ ಕಾಯ (ಪಂಚೇಂದ್ರಿಯ), ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯವನ್ನು ನಿಯಂತ್ರಿಸುವುದು.[ಐದು ಜ್ಞಾನೇಂದ್ರಿಯ (-ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ) ಹಾಗೂ ಐದು ಕರ್ಮೇಂದ್ರಿಯಗಳು (-ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ)] ಐದನೆಯ ಅಭ್ಯಾಸವೆಂದರೆ ಕೈಯ್ಯಡಕ್ಕಂ. ಕೈ ಎಂದರೆ ಕರ ಎಂದರ್ಥ. ನೀವು ಎಲ್ಲವನ್ನೂ ನಿಯಂತ್ರಿಸುತ್ತೀರಿ. ನಿಮ್ಮ ಭಾವನೆಗಳು, ನಿಮ್ಮ ಪರಿಸ್ಥಿತಿ, ನೀವು ಎಂದಿಗೂ ಪ್ರಭಾವಿತರಾಗುವುದಿಲ್ಲ. ಎಲ್ಲವೂ ನಿಮ್ಮ ಕೈಕೆಳಗೆ ಇರುತ್ತದೆ. ಹಾಗಾಗಿ ಕೈಯಲ್ಲಿ ಹಿಡಿದರೆ ಮಾತ್ರ ಸಿಗುವುದು ಎಂಬುದು ಕೈಯ್ಯಡಕ್ಕಂ. ನಿಮ್ಮ ಜೀವನದ ಮೇಲೆ ನಿಯಂತ್ರಣವಿರಬೇಕು.
ಈ ಐದು ವಿಷಯಗಳ ಮೇಲೆ ನಿಯಂತ್ರಣ ಹೊಂದಿರುವವನು ಯೋಗಿ. ನಿಮ್ಮ ಬಾಲ್ಯದಲ್ಲಿ ಅಂಜಡಕ್ಕಂ ಎಂದು ಕೇಳಿರಬಹುದು. ತಮಿಳಿನಲ್ಲಿ ಅಂಜು ಎಂದರೆ ಐದು. ಇದರರ್ಥ ಎಲ್ಲಾ ಐದು ಅಭ್ಯಾಸಗಳನ್ನು ಅನುಸರಿಸಿದವನು ಎಂದು. ಇಂತಹ ವಿದ್ಯೆ ಮಹಾತ್ಮರ ಸನ್ನಿಧಿಯಲ್ಲಿ ಅಭ್ಯಾಸ ಮಾಡತಕ್ಕದ್ದು.”
ಆಧ್ಯಾತ್ಮಿಕತೆಯ ವಿಶೇಷತೆಯನ್ನು ಶ್ರೀ ಗುರುಗಳು ನಮ್ಮೆಲ್ಲರಿಗೂ ಸರಳವಾಗಿ ಬೋಧಿಸಿದ್ದಾರೆ. ಯೋಗಿಯ ಪಥವನ್ನು ಇಂದು ಅರಿತೆವು. ಇಂತಹ ಗೌಪ್ಯವಾದ ಜ್ಞಾನವನ್ನು ಪಡೆವ ನಾವೇ ಧನ್ಯರು. ನಿರ್ಲಕ್ಷವೆಂಬ ಅಜ್ಞಾನವನ್ನು ಹೊಡೆದು, ವಿಶ್ವಕ್ಕೇ ಜ್ಞಾನದ ಮಾರ್ಗದರ್ಶಕವಾದ ‘ಧ್ರುವತಾರೆ’ ಗೆ ನಾವೆಲ್ಲರೂ ಚಿರಋಣಿಯಾಗಿರಬೇಕು.
- ಸೌಧಾಮಿನಿ

Post Comment