Loading Now

ಅಕಾಲಿಕ ನಿಧನ ಹೊಂದಿದ ಖ್ಯಾತ ಚಿತ್ರ ನಟ ಸಮಾಜ ಸೇವಕ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಪಟ್ಟಣದ ಭಗವಾನ್ ಚಿತ್ರಮಂದಿರ ಮುಂಭಾಗದಲ್ಲಿ ಶ್ರದ್ದಾಂಜಲಿ.

Alagud Revanna.
ತಿ.ನರಸೀಪುರ. ನ.08:-ಅಕಾಲಿಕ ನಿಧನ ಹೊಂದಿದ ಖ್ಯಾತ ಚಿತ್ರ ನಟ ಸಮಾಜ ಸೇವಕ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಪಟ್ಟಣದ ಭಗವಾನ್ ಚಿತ್ರಮಂದಿರ ಮುಂಭಾಗದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಭಾನುವಾರ ರಾಜ್ಯಾದ್ಯಂತ ಏಕ ಕಾಲಕ್ಕೆ  ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ಶ್ರದ್ಧಾಂಜಲಿ ಸಲ್ಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿರ್ಮಾನಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಭಗವಾನ್ ಚಿತ್ರಮಂದಿರದ ಮುಂಭಾಗ. ಚಿತ್ರ ಪ್ರದರ್ಶಕರರು ನಟ ಪುನೀತ್ ರಾಜ್ ಕುಮಾರ್‌ ರವರ ಭಾವ ಚಿತ್ರ ಇರಿಸಿ ಮುಂಬತ್ತಿ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪ್ಪು ರವರನ್ನು ಸ್ಮರಿಸಿ ಮಾತನಾಡಿದ ಅನಾಥ ಶವ ಮುಕ್ತಿದಾಯಕ ಡಾ.ಮಾದೇಶ್ ಕೇವಲ ಸಿನಿಮಾ ಕ್ಷೇತ್ರಕ್ಕೆ ಗುರುತಿಸಿಕೊಳ್ಳದ ಪುನೀತ್ ರಾಜ್ ಕುಮಾರ್ ಅನೇಕ ಸಮಾಜ‌ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದರು.ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರು ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದಾರೆ. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗಪಡಿಸದೇ ಸಮಾಜ ಸೇವೆ ಮಾಡಿ ದೈಹಿಕವಾಗಿ ನಮ್ಮಿಂದ ದೂರವಾಗಿದ್ದಾರೆ ಆದರೆ ಅವರ ಸಮಾಜಮುಖಿ ಸೇವೆಗಳ ಮೂಲಕ ಪವರ್ ಸ್ಟಾರ್ ಕನ್ನಡಿಗರ ಮನ ಮನೆಗಳಲ್ಲಿ ಚಿರಸ್ಥಾಯಿಯಾಗಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿ.ಎನ್.ಶ್ರೀನಿವಾಸ ಮೂರ್ತಿ,ಕೇಶವಮೂರ್ತಿ ,ಡಿ.ಮಹದೇವು, ಚನ್ನಬಸವಣ್ಣ ,ರೇವಣ್ಣ ,ವೆಂಕಟೇಶ್ ,ಹರೀಶ್ ಮಾಲಿಕ ಕೆ.ಎಲ್ ಶ್ರೀನಾಥ್ ,ಅನುಪ್  ಮತ್ತಿತರರು ಭಾಗವಹಿಸಿದ್ದರು.

Post Comment

You May Have Missed