ಅಂಗನವಾಡಿ ಮತ್ತು ಶಾಲೆಯ ಪಕ್ಕದಲ್ಲಿ ಹರಿಯುವ ಗಲೀಜು ಚರಂಡಿ ನೀರು ಸ್ವಚ್ಛತೆ ಗೊಳಿಸಿದ ಅಧಿಕಾರಿಗಳು .
ಸಂಜೆ ಸಮಯ ಪತ್ರಿಕೆಯ ಫಲಶ್ರುತಿ!
ಹನೂರು 08 ಅಕ್ಟೋ : ಚರಂಡಿ ಇಲ್ಲದೆ ರಸ್ತೆಯಲ್ಲಿ ಹರಿಯುವ ಗಲೀಜು ನೀರು, ಪಕ್ಕದಲ್ಲೇ ಶಾಲೆ ಮತ್ತು ಅಂಗನವಾಡಿ ಕೇಂದ್ರವಿದ್ದರೂ ಸಂಬಂಧ ಪಟ್ಟವರು ಇತ್ತ ಗಮನಹರಿಸುತ್ತಿಲ್ಲ ಎಂದು ಕುರುಬರದೊಡ್ಡಿ ಗ್ರಾಮಸ್ಥರು ಆರೋಪಿಸಿದ್ದರು.
ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುರುಬರದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಶಾಲೆ ಮತ್ತು ಅಂಗನವಾಡಿ ಪಕ್ಕದಲ್ಲಿ ಚರಂಡಿ ಗಲೀಜು ನೀರು ಹರಿಯುವುದನ್ನು ಗಮನಿಸಿ ಸ್ಥಳವನ್ನು ಸ್ವಚ್ಛತೆ ಗೊಳಿಸಿದರು.
ಪಿಡಿಓ ನಂದೀಶ್ ಮಾತನಾಡಿ ಸದಸ್ಯರಸಹಕಾರದೊಂದಿಗೆ ನನ್ನ ಅಧಿಕಾರವಧಿಯಲ್ಲಿ ಅಜ್ಜೀಪುರ ಗ್ರಾಮ ಪಂಚಾಯಿತಿಯಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ, ಇದಕ್ಕೆ ನಮ್ಮ ಗ್ರಾಮ ಪಂಚಾಯತಿಯ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.


Post Comment