ಅಂಗನವಾಡಿ ಅವ್ಯವಸ್ಥೆ ಕಂಡು ಕೆರಳಿದ ಶಾಸಕ ಎಂ.ಅಶ್ವಿನ್ ಕುಮಾರ್.
ತಿ.ನರಸೀಪುರ.ನ.11:- ಅಂಗನವಾಡಿ ಅವ್ಯವಸ್ಥೆ ಕಂಡು ಕೆರಳಿದ ಶಾಸಕ ಎಂ.ಅಶ್ವಿನ್ ಕುಮಾರ್ ತಲಕಾಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಧರಣೀಶ್,ಶಿಶು ಅಭಿವೃದ್ಧಿ ಅಧಿಕಾರಿ ಬಸವರಾಜು ಸೇರಿದಂತೆ ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಮಹದೇವು ರವರನ್ನು ತಿವ್ರ ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ತಲಕಾಡು ಗ್ರಾಮದಲ್ಲಿ1ಕೋಟಿಗೂ ಹೆಚ್ಚು ಮೊತ್ತದಲ್ಲಿ ಸಾಮಾನ್ಯ ವರ್ಗದ ನಿವಾಸಿ ಗಳ ಬಡವಣೆಗಳ ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ನೂತನ ಗ್ರಂಥಾಲಯ ಮತ್ತು ಭೋಧನಾ ಕೊಠಡಿಗಳ ಉದ್ಘಾಟನೆ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಶಾಸಕರು ಒಕ್ಕಲಿಗರ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಕಳೆದ 8 ವರ್ಷದಿಂದ ವಿದ್ಯುತ್ ಸಂಪರ್ಕ ಸೇರಿದಂತೆ ಶೌಚಾಲಯ ಇಲ್ಲ ಎಂಬ ದೂರು ಕೇಳುತ್ತಿದ್ದಂತೆ ಕೆರಳಿದ ಶಾಸಕರು ಅಧಿಕಾರಿಗಳಿಗೆ ಚಳಿ ಬಿಡಿಸಿದರು.
ತಾಕತ್ತನ್ನು ಪ್ರಶ್ನೆ ಮಾಡಿದ ಶಾಸಕರು:- ಒಂದು ಅಂಗನವಾಡಿ ಕೇಂದ್ರಕ್ಕೆ ಮೂಲ ಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಾದ ನಿಮಗೆ ತಾಕತ್ತು ಇಲ್ವ ಎಂದು ಗದರಿದರಲ್ಲದೆ ಸಂಬಂಧಿ ಸಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಹಶೀಲ್ದಾರ್ ಬಿ.ಗಿರಿಜಾ ರವರಿಗೆ ತಾಖೀತು ಮಾಡಿದರು.
ಮಾನ ಮರ್ಯಾದೆ ಇದೀಯಾ:-ಕಳೆದ ಎಂಟು ವರ್ಷಗಳಿಂದ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಶಿಶು ಅಭಿವೃದ್ಧಿ ಇಲಾಖೆಗೆ ಸಾಧ್ಯವಾಗಿಲ್ಲ ಎಂದರೆ ಎಂತಹ ದರಿದ್ರ ಕೆಲಸ ಮಾಡುತ್ತಿದ್ದೀರಿ ಎಂದು ಏರಿದ ಧ್ವನಿಯಲ್ಲಿ ಕೆಂಡಕಾರಿದರಲ್ಲದೆ ನಿಮಗೆ ಮಾನ ಮರ್ಯಾದೆ ಇಲ್ವ ಎಂದು ಪ್ರಶ್ನೆ ಮಾಡಿದರು, ಮುಂದೆ ಕಾಟಚಾರದ ಕೆಲಸ ಮಾಡುವುದನ್ನು ಬಿಟ್ಟು ಪ್ರಾಮಾಣಿಕ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಗಿರಿಜಾ, ಜಿ.ಪಂ.ಎಇಇ ನಾಗೇಂದ್ರ,ನೀರಾವರಿ ಇಲಾಖೆ ಎಇಇ ರವೀಂದ್ರ, ಜೆಇ ಸುಹಾಸ್,ಕುಡಿಯುವ ನೀರು ಸರಬರಾಜು ಇಲಾಖೆ ಜೆಇ ಬಿಂದು, ಸಿಡಿಪಿಒ ಬಸವರಾಜು,ನರೇಗಾ ನಿರ್ದೇಶಕ ಮಹದೇವು,ನಿರ್ಮಿತಿ ಕೇಂದ್ರ ಜೆಇ ನಿರಂಜನ್ ಪ್ರಸಾದ್, ತಲಕಾಡು ರಾಜಸ್ವ ನಿರೀಕ್ಷ ಸಿದ್ದರಾಜು, ಗ್ರಾ.ಪಂ.ಅಧ್ಯಕ್ಷ ಕೆಂಪಯ್ಯ, ಉಪಾಧ್ಯಕ್ಷೆ ಗೌರಮ್ಮ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಪ್ರಧಾನ ಕಾರ್ಯದರ್ಶಿ ಹೆಮ್ಮಿಗೆ ಹೊನ್ನನಾಯಕ, ಹೋಬಳಿ ಅಧ್ಯಕ್ಷ ಸುಂದ್ರ ನಾಯಕ, ಎಸ್.ಟಿ. ಘಟಕದ ತಾಲ್ಲೂಕು ಅಧ್ಯಕ್ಷ ಗಾಡಿ ಮಹದೇವ, ಮಹಿಳಾ ಘಟಕದ ಅಧ್ಯಕ್ಷೆ ಯಶೋಧಮ್ಮ, ಗ್ರಾ.ಪಂ.ಸದಸ್ಯ ಮೋಹನ್ ಕುಮಾರ್ ಗೌಡ,ಪ್ರಮೋದ್, ನಾಗೇಂದ್ರ,ಅನಿತಾ,ಮತ್ತಿತರರು ಹಾಜರಿದ್ದರು.




Post Comment